ಬದುಕೆoಬ ದಾರಿ

Updated: Jun 30, 2020

ಬದುಕೆoಬ ದಾರಿಯಲಿ

ದೇಹವೆಂಬ ಗಾಡಿಯಲಿ

ಎಲ್ಲರದು ಮಿಂಚಿನ ಓಟ

ಆಚೀಚೆ ಹಸನುಂಟು

ಮುಂದೊಂದು ಗುರಿಯುಂಟು

ಚಲಿಸುವೇವು ಕಲಿಯುತ ಪಾಠ


ಮುಂದೊಂದು ತಿರುವಿದೆ

ಸಾಧ್ಯತೆಗಳು ನೂರಿವೆ

ಹಿಡಿ ನಿನ್ನ ನೆಚ್ಚಿನ ದಾರಿ

ಆತ್ಮವೇ ಚಾಲಕ

ನಿನ್ನ ಆಸೆಗಳ ಮಾಲಕ

ಮುಟ್ಟಿಸುವನು ಬಯಸಿದ ಗುರಿ


ನಿನ್ನಂತೆಯೆ ನೂರಾರು ಜನ

ಪಯಣಿಸುವರು ಅನುದಿನಾ

ಹುಡುಕುತ ಬಾಳಿನ ಅರ್ಥ

ಎಲ್ಲರ ಜೊತೆ ಗೂಡಿ

ಸವಿಯುತ ದೇವರ ಮೋಡಿ

ಮರೆಯೋಣ ದಿನ ದಿನದ ಸ್ವಾರ್ಥ


ನಿಂತಾಗ ಘನವಾಗಿ ನಿಲ್ಲು

ನಿಲುಕುವುದು ಕಾಮನಬಿಲ್ಲು

ನಡಿಯುವುದೊಂದೆ ನಿನ್ನ ಕೆಲಸ

ನಡೆದಷ್ಟೂ ದಾರಿ ಇದೆ

ದಾರಿಯಲ್ಲಿ ಉತ್ತರವಿದೆ

ಸವಿಯೋಣ ಬಾಳಿನ ಸೊಗಸ.


ನಿಶಾಂತ್ ಎಸ್.

201 views2 comments