ಬದುಕಬೇಕೆಂದರೆ...
- Nishanth Shreepad
- Oct 18, 2020
- 1 min read
ಬದುಕಬೇಕೆಂದರೆ ನೀನು
ನೀನಾಗಿಯೇ ಇರು ಈ ಸಮಾಜದಲ್ಲಿ
ಮೂಗು ಹಿಡಿದು ತಪಸ್ಸು ಮಾಡುತ್ತ
ಇಂದ್ರಿಯಗಳನ್ನೆಲ್ಲ ಒಳಗೆಳೆದುಕೊಳ್ಳುತ್ತ.
ಹಚ್ಚಿಕೊಳ್ಳಬೇಡ ಯಾವುದನ್ನು
ಕಲಿ ನಿರಂತರ ಬೆಚ್ಚಗಿಡುವುದನ್ನು
ನಿನ್ನ ಆದರ್ಶಗಳನ್ನು
ಮತ್ತು ಹೊಚ್ಚ ಹೊಸದಾಗಿ ಇಡು
ನಿನ್ನ ಮನಸ್ಸನ್ನು.
ಒಮ್ಮೆ ಈ ಪ್ರಯೋಗ ಮಾಡಿ ನೋಡು:
ಮೇಲುಮೇಲಕ್ಕೆ ಏರುತ್ತ ಹೋಗುವುದನ್ನು
ಸದಾ ತಪಸ್ಸು ಮಾಡುತ್ತ
ಮುಗಿಲು ಮತ್ತು ಶುಭ್ರ ಆಕಾಶದಲ್ಲಿ ವಿಹರಿಸುವುದನ್ನು
ಬೇಲಿಯೇ ಇಲ್ಲದ ವಾಸ್ತವದಲ್ಲಿ
ಎತ್ತರದಲ್ಲಿ ಬದುಕುವುದನ್ನು.
ಅಲ್ಲಿ ಕಿಟಿಕಿ ಬಾಗಿಲುಗಳಿಲ್ಲ
ಗೋಡೆಗಳಿಲ್ಲ
ಸ್ವಚ್ಛಂದ ಗಾಳಿ ಮತ್ತು ಬೆಳಕು
ಸಣ್ಣದಾಗಿ ಕಾಣುವ ನೆಲ.
ಆಮೇಲೆ ನಿನಗೆ ಗೊತ್ತಾಗುತ್ತದೆ
ಮೇಲೇರಲು ಎಷ್ಟೊಂದು ಹಾದಿಗಳು!
ನೆಲದ ಮೇಲಿರುವ ಈ ಜೀವಗಳು
ತಾವೇ ಮನಸ್ಸು ಮಾಡಬೇಕು
ಮೇಲೆ ಹತ್ತಿ ಬರಲು
ಎತ್ತರದಲ್ಲಿ ಚಿತ್ತ ನೆಡಲು.
-ಡಾ. ವಸಂತಕುಮಾರ ಪೆರ್ಲ.
Comments