ಮಕ್ಕಳ ಕವಿತೆ
ಬೇಸಿಗೆಯಲ್ಲಿ ಬೇಕೇಬೇಕು
ತಂಪು ಪಾನೀಯ
ಐಸ್ ಕ್ರೀಮ್,ಸರಬತ್ತು ಇಲ್ಲದಿದ್ದರೆ
ಸೆಕೆ ಎಷ್ಟೊಂದು ಅಸಹನೀಯ
ಸಕ್ಕರೆ ಬೇಕು,ಲಿಂಬು ಬೇಕು
ರೆಫ್ರಿಜರೇಟರ್ ಇರಲಿ ತಂಪಿಗಾಗಿ
ಹಣ ಬಲ ಇದ್ದವರಿಗಿರಲಿ ಇದೆಲ್ಲ
ಬೇರೇನಾದರೂ ಬೇಕಲ್ಲ ಬಡವರಿಗಾಗಿ
ಮಣ್ಣಿನ ಗಡಿಗೆಯಲಿಟ್ಟ ನೀರು
ಎಷ್ಟೊಂದು ತಂಪು ನೋಡಿರಿ
ಕರೆಂಟ್ ಗಾಗಿ ಕಾಯಬೇಕಿಲ್ಲ
ಐಸ್ ಇಲ್ಲದೆ ನೀರು ಕುಡಿಯಿರಿ
ಮಜ್ಜಿಗೆ ತುಂಬಿದ ಗಡಿಗೆಯೊಂದಿದ್ದರೆ
ಸರಬತ್ತು ಯಾವುದು ಬೇಕಿಲ್ಲ
ಒಂದೆರಡು ಲೋಟ ಮಜ್ಜಿಗೆ ಕುಡಿದರೆ
ಬಾಯಾರಿಕೆ ಮತ್ತೆ ಆಗುವುದಿಲ್ಲ
ಸಕ್ಕರೆ,ಲಿಂಬು ಬೇಕಾಗಿಲ್ಲ
ಬಣ್ಣ ಗಿಣ್ಣ ಯಾತಕೆ ಬೇಕು
ಅತಿಥಿಗಳು ಆಗಮಿಸಿದರೆ ಮನೆಗೆ
ಮಜ್ಜಿಗೆಯೊಂದಿದ್ದರೆ ಸಾಕು
ವೆಂಕಟೇಶ ಹುಣಶಿಕಟ್ಟಿ
Comments