top of page

ಬಡತನವೂ.... ಕಿರೀಟವೂ

ದೂರ ದೇಶದ ದೊರೆಯೊಬ್ಬ

ನನ್ನೂರಿನ ಮನೆಗಳ ಕಿಟಕಿಗಳಲಿ

ಅರಮನೆ ಕಟ್ಟುತ್ತಿದ್ದಾನೆ;

ಏಕೆಂದರೆ

ಮನೆಯೊಳಗೆ ಬೆಳಕು ಬರುವ

ಕಿಟಕಿಗಳೆಲ್ಲಾ ಅವನಿಗೆ ಗೊತ್ತು.

ಕಿಟಕಿಗಳೆಂದರೆ....

ಹಡಗುಗಳಿಗಿಂತ ದೊಡ್ಡವು.

ತುಂಬಿಸುವ ಅವಸರದಲಿ

ಬೆಳಕೂ ಕೂಡ ಸಗಟು ಸಗಟಾಗಿ

ಬಡತನದ ಕಿರೀಟಗಳನ್ನು ಮಾರುತ್ತಿದೆ.

ಇದೀಗ ನನ್ನೂರಿನ ಮನೆಮನೆಗಳಲಿ

ಬೀದಿಬದಿಯ ವ್ಯಾಪಾರ

ಮನೆಗಳೆಂದರೆ ..... ಮನೆಗಳಲ್ಲ

ದೊರೆಯ ಅರಮನೆಯ ಕಂಬಗಳು

ಅವುಗಳಿಗೆ ಕೊಂಬೆಗಳಿವೆ ನೆರಳಿಲ್ಲ.

ಬೆಳೆಯುತ್ತವೆ. ಬೆಳೆಯುವುದಿಲ.್ಲ

ಆದರೆ,

ನನ್ನವರು ಬಡವರು

ಕಿರೀಟಗಳನು ಹೊತ್ತು ಹಗರಣವಾಗುತ್ತಿದ್ದಾರೆ.


- ರಮೇಶ ಗೌಡ ಕಡಮೆ.



ಮೂಲತ: ಕುಮಟ ತಾಲೂಕಿನ ಕಡಮೆಯವರಾದ ಇವರು ಪ್ರಸ್ತುತದಲ್ಲಿ ಉಡುಪಿಯ ಬೈಂದೂರು ತಾಲೂಕಿನ ಕಂಬದಕೋಣೆ ಪಿ. ಯು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. ಹನಿಗವನ, ಕವಿತೆ, ಸಣ್ಣಕತೆ. ಲೇಖನಗಳನ್ನು ಬರೆಯುವಲ್ಲಿ ಆಸಕ್ತಿ ಹೊಂದಿರುವ ಇವರು ತಮ್ಮ ಮೊದಲ ಕವನ ಸಂಕಲನದ ಬಿಡುಗಡೆಯ ಸಿದ್ದತೆಯಲ್ಲಿದ್ದಾರೆ. ಇವರು ಬರೆದ ಸಣ್ಣಕತೆಗಳಿಗೆ ಹಲವುÉ ಕತೆಗಳಿಗೆ ಬಹುಮಾನ ದೊರಕಿದೆ- ಸಂಪಾದಕ

 
 
 

Comments


©Alochane.com 

bottom of page