top of page

ಪುಸ್ತಕ

ಪುಸ್ತಕಗಳೆಂದರೆ ದೇವಿ ಸರಸ್ವತಿ!!

ಜ್ಞಾನಾರ್ಜನೆಗೆ ಬಳಸಿಕೊಳ್ಳಬೇಕಾದ ರೀತಿ!

ಓದಿನಲ್ಲಿ ಇರಿಸಿ ಶ್ರದ್ಧೆ - ಭಕ್ತಿ -ಪ್ರೀತಿ!!

ಪಡೆಯಬಹುದು ವಿಷಯ ಪರಿಣಿತಿ!!


ವಿದ್ಯಾರ್ಜನೆಗೆ ವಾಚನಾಲಯ -ಶಾಲೆ!

ಜೊತೆಗೆ ಮಾರ್ಗದರ್ಶಿ ಗುರುಗಳು!

ಸಾಹಿತ್ಯ ಪ್ರೇಮಿ -ಸಾಹಿತ್ಯಾಸಕ್ತ - ಸಾಹಿತಿಗಳ!

ಮನೆಗಳಾಗಿವೆ ಪುಸ್ತಕ ದೇಗುಲಗಳು!!


ಜಂಗಮವಾಣಿ - ಈ ಬುಕ್ ಯುಗದಲ್ಲಿ!

ಕಡಿಮೆಯಾಗುತ್ತಿದೆ ಪುಸ್ತಕ ಓದು!

ಮುಂದಿನ ಪೀಳಿಗೆ ಪ್ರಶ್ನಿಸಬಹುದು

ಪುಸ್ತಕವೆಂದರೆ ಏನು.....?


ಸಾವಿತ್ರಿ ಶಾಸ್ತ್ರಿ, ಶಿರಸಿ

1 view0 comments

Commenti


bottom of page