ರಂಗದಲ್ಲಿ ತೈ ತಿಕಟ ತೈ
ತಾಳಕ್ಕೆ ತಕ್ಕಂತೆ ಹೆಜ್ಜೆ
ಪಿತೃ ವಾಕ್ಯ ಪರಿಪಾಲಕ ರಾಮ
ಧರ್ಮಯುದ್ದ ಸಾರುವ ಕ್ರಷ್ಣ
ರಾಜಧರ್ಮ ಪಾಲಿಸುವ ಧರ್ಮರಾಯ
ಎದೆಯಲ್ಲಿ ಹುದುಗಿಸಿಟ್ಟ
ಅಮ್ರತ ಕಳಶವನ್ನೇ ವಾಮನನಿಗೆ
ಧಾರೆ ಎರೆಯುವ ದಾನಶೂರ ಕರ್ಣ
ಛಲದಂಕಮಲ್ಲ ಕೌರವ
ಕುರುಕ್ಷೇತ್ರ ರಣಾಂಗಣದಲ್ಲಿ
ಶೌರ್ಯ ದಿಂದ ಹೋರಾಡುವ
ಸವ್ಯಸಾಚಿ ಪಾರ್ಥ
ರಂಗದಲ್ಲಿ ಹೊಗಳು ಭಟರಿಂದ
ಬಹುಪರಾಕ್ ನ ಸುರಿಮಳೆ
ಚಂದ್ರಕಿಯಂತ ಕುಣಿತಕ್ಕೆ
ಪ್ರೇಕ್ಷಕರೇ ಮಂತ್ರ ಮುಗ್ದ
ಅಂಬರವ ಮುತ್ತಿದ ತಾರೆಗಳು
ಮಾಯ
ಇರುಳು ಕಳೆದು ಬೆಳಕು
ಹರಿದಾಗ
ಸೋತ ಮೊಗವ ಹೊತ್ತು
ಮನೆಯ ಕಡೆಗೆ
ಭಾರವಾದ ಹೆಜ್ಜೆ
ಹೆಂಡತಿ ಹಸಿಕೂಸಿನ
ಹೊಟ್ಟೆ ಹೊರೆವ ವ್ಯಥೆ
ಯಕ್ಷಲೋಕದ ತಾರೆಗೆ.............!
ಅನಿಲ ಕಾಮತ,ಸಿದ್ದೇಶ್ವರ
コメント