ನೆಲ ಮತ್ತು ನೆಲೆ
- ಆಲೋಚನೆ
- Aug 25, 2021
- 1 min read
ಕಾಲುಗಳಿಗೆಲ್ಲ ನೆಲವೇ ನೆಲೆ
ತೊಟ್ಟ ಚಪ್ಪಲಿಯ ಬೆಲೆ ಎಷ್ಟಿದ್ದರೂ!
ಆದರೂ
ತಲೆಗಳಿಗೆ ಹಾಗೇನೂ ಹೇಳುವಂತೇ ಇಲ್ಲ:
ನೆಲೆಯ!
ಬಸ್ಸು ಕಾರು ರೈಲು
ಪೊಟಪೊಟಾ ಸದ್ದಿನ ಮೋಟಾರು ಸೈಕಲು
ಹತ್ತಿ ಹೊರಟರು ಎಂದೂ
ಕಾಲಿಗೆ ಚಪ್ಪಲು
ಇದ್ದರೂ ಬಿಡದೊಲು
ಹೊರುವುದೇ ನೆಲದೊಡಲು,
ತಾನಾಗಿ ಹೆಗಲು.
- ಗಣಪತಿ ಗೌಡ,ಹೊನ್ನಳ್ಳಿ
Comments