top of page

ನಿರಂತರಯತ್ನ

ಎಲ್ಲರೆದೆಯಲ್ಲೂ

ಇದೆಯೊಂದು

ಹಿಮಾಲಯ ಶಿಖರ,

ಏರುತ್ತಾರೆ

ಕೆಲವರು ಅರ್ಧ,

ಮತ್ತಷ್ಟು ಜನ ಗಿರ್ಧ;

ನಡೆದೇ ಇದೆ

ಉಳಿದವರ

ಹೋರಾಟ

ಏರಲು ಪೂರ,

ಸಿಸಿಪಸ್-ನಂತೆ

ನಿರಂತರ.


ಡಾ. ಬಸವರಾಜ ಸಾದರ

7 views0 comments
bottom of page