top of page

ನೂರೆಂಟು ಜನುಮಗಳಿರಲಿ

ಭೂತಕಾಲದ ಬೆರಗು

ವರ್ತಮಾನದ ಲಾವಣ್ಯ

ಭವಿಷ್ಯದ ಕಾತರದಲ್ಲಿ

ಜನ್ಮಗಳ ಜಾರುಬಂಡಿ

ಮರೆವೆಯಲ್ಲೂ ಕನಸ ನಕ್ಷತ್ರ


ಕರ್ಮಯೋಗವೇ ಮಹಾಯೋಗ !

ಉಪದೇಶ ಪಾರ್ಥನಿಗಷ್ಟೆ ?


ಆಡುಂಬೋಲದ ಸೂತ್ರಿಣಿಯ ಅರಿಕೆ

ನಿಜವಾಗಲಿ ಜನ್ಮಗಳ ಕಲ್ಪನೆ

ದೇವ ದೇವನೇ ಬೆರಗಾಗಿ

ಮಣಿದು ನಿಲ್ಲುವ

ಸಹನೆಯಾಗಲು


ಹೆಣ್ಣಾಗಿ, ತಾಯಾಗಿ

ಜಗದ ಬೆರಗಾಗಿ

ಬೆಳಕಾಗಿ ಬಾಳಲು

ಒಂದೇನು ಹತ್ತೇನು

ನೂರೆಂಟು ಜನುಮವಿರಲಿ.


***

ನೂತನ ದೋಶೆಟ್ಟಿ

15 views0 comments

Comments


©Alochane.com 

bottom of page