top of page

ನಿರೀಕ್ಷೆ

Poetry is not an opinion. It is a song rises from bleeding wound or a smiling mouth.

- Sand and Foam

Khalil Gibran

ಅಟ್ಟಹಾಸದಿ ಮೆರೆವ

ದುಷ್ಟರೆದೆಯಲಿ ಅವಿತ

ಸೇಡಿನ ಉರಿ ಜಗದೆಲ್ಲೆಡೆ

ಪ್ರತಿಧ್ವನಿಸಬಹುದೇ

ಆಗಸಕ್ಕೂ ತಲುಪಬಹುದೇ

ಖಾಂಡವ ವನದ ದಹನದಂತೆ

ಸ್ವಯಂಗೈದ ಅಪರಾಧಗಳೇ

ಕಾರಣವಾಗಬಹುದೇ

ಆಹುತಿಗೊಳ್ಳಲು ಭಸ್ಮಾಸುರಂದಿರು

ಸಕಲ ಮನುಜರೂ ಆಪೋಶನಗೊಂಡಾರೇ

ಒಂದೇ ಕ್ಷಣದಲಿ

ಬಲ್ಲವರಾರು ಮುಂದಿನ ಆತಂಕದ

ದಾವಾಗ್ನಿಯ ದಾರಿಯ ಗಮ್ಯವನು

ಇರಬಹುದೇ ಉರಿಬಿಸಿಲ

ಮರಳುಗಾಡಿನ ಭರವಸೆಯ

ತಣ್ಣನೆಯ ಓಯಸಿಸ್ ಒರತೆ

ಕಠೋರ ಹೃದಯಗಳಲಿ

ಕೇಳಬಹುದೇ ಮುಂದೆ

ಹಸುಕಂದಗಳ ನಗುವನು

ಚೀತ್ಕಾರಗಳ ಬದಲು

ಕೆಂಪಿನ ಆಕ್ರಂದನದಲಿ

ಬದುಕುಳಿದ ಹಕ್ಕಿಯೊಂದು

ಕಟ್ಟಬಹುದೇ ಹಸಿರಲಿ

ನೆಮ್ಮದಿಯ ಗೂಡೊಂದನು

ಕಾಣಬಹುದೇ

ಬಂದೂಕಿನ ನಳಿಗೆಯ

ನೆತ್ತರಹನಿಯೊರೆಸಿ

ಅರಳಿದ ಶಾಂತಿ - ಪ್ರೀತಿಯ

ಚೆಂಗುಲಾಬಿಯನು

ನಿರೀಕ್ಷಿಸಬಹುದೇ

ಕಾಲನ ಹೊಸ ಆಶಯದ

ಬೆಳಕ ಭಾಷ್ಯವನು

ಶಾಂತಲಾ ರಾಜಗೋಪಾಲ್

ಬೆಂಗಳೂರು

Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

Comments


©Alochane.com 

bottom of page