top of page

ನೀ ಮಾಯೆಯೊ ನಿನ್ನೊಳು ಮಾಯೆಯೊ [ಕವಿತೆ]

Updated: Sep 3, 2020



ಮನಸೆ ನಿನ್ನೊಳಗೊಂದು

ಒಳ ಮನಸೆ

ನೀ ಮಾಯೆಯೊ

ನಿನ್ನೊಳು ಮಾಯೆಯೊ|


ಕಾಣಲೇನೊ ತಿಳಿಗೊಳದಂತೆ

ಪ್ರಶಾಂತ ಮಂದಹಾಸ

ಆದರೆ ಒಳಗೊಳಗೇ

ಸುಡುವ ಅಗ್ನಿ ಜ್ವಾಲೆ

ಕದನ‌ ಕೋಲಾಹಲ

ಬುಸುಗುಡುವ ಹಾಲಾಹಲ

ಹಲವೊಮ್ಮೆ ಅನ್ಯರ

ಹಾಳುಗೆಡಹಿದರೆ

ಒಮ್ಮೊಮ್ಮೆ ನಿನ್ನನ್ನೇ

ದಹಿಸೀತು ಎಚ್ಚರ|


ಮೂಳೆ ಮಾಂಸ ಅಂಗಗಳ

ಅಂಗಳದೊಳಗೆ ದುರ್ಬೀನು

ಹಿಡಿದು ಜಾಲಾಡಿದರೂ

ನಿನ್ನ ಸುಳಿವಿಲ್ಲ

ಆದರೂ ನಿನ್ನ

ಕಿಡಿಗೇಡಿತನಕೆ ಮಿತಿಯಿಲ್ಲ|


ನೀ ಮಾಯೆಯೊ

ನಿನ್ನೊಳು ಮಾಯೆಯೊ

ಬೇಡ ಈ ಗಂಡಾಂತರ

ನೀ ಬುದ್ಧನಂತಾಗು|




ಸುಧಾ ಹಡಿನಬಾಳ

೯೪೮೧೧೧೧೧೯೩

75 views0 comments

Comments


bottom of page