ಕಣ್ಣುರಿಸುವ ಹೊಗೆ-ಬೆಂಕಿ ಮನೆಯಲ್ಲಿ
ಸುರುಕು-ಸುರ್ವಾಗಳ ಎಡೆಬಿಡದ ಏರಿಳಿತ ಅರ್ಘ್ಯಾದಿ ಐವತ್ನಾಲ್ಕು ಸಂಯುಕ್ತಗಳು ಅಗ್ನಿ ಪಾಲು,
ಸುರುಕುಗಳ ಲೆಕ್ಕಕ್ಕೆ ಪ್ರತಿಯಾಗಿ ಮನೋವಾಂಛೆಗಳನೆಲ್ಲ ವರವಾಗಿಸುವ ದ್ವಿಪಕ್ಷ ಒಪ್ಪಂದ ದೇವರೊಡನೆ...
ಅಗ್ನಿದೇವನ ಪ್ರೀತ್ಯರ್ಥ
ಹವಿಸ್ಸುಗಳ ಪ್ರದಾನ ಮನೆಯಲ್ಲಿ
ಅನಿಷ್ಟಗಳ ಕಳೆಯಲು, ಮನದಲ್ಲಲ್ಲ..!ಮನೆಯಲ್ಲಿ ನೆಮ್ಮದಿ ಮನೆ ಮಾಡಲು..!
ಈ ಸದ್ದು ಗದ್ದಲದ ನಡುವೆ ಫೋನು ರಿಂಗಣಿಸಿತು ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು....
ಅರೇ ಹಿತವಾಗಿದೆ ದನಿ ; ಭಾವ ಕೂಡ ; ಧರ್ಮ-ದೇಶ-ಕಾಲಾತೀತ ದೃಷ್ಟಿ. ಆದರೇನು? ಅದರದೇನು ಮಹತ್ವ? ಏಕೆಂದರೆ ಅದು ತಿಳಿಯುವಂತಿದೆ, ಗೊಂದಲಗಳಿಲ್ಲದೆ ಮನ ಮುಟ್ಟುವಂತಿದೆ..
ನಮಗೋ ತಿಳಿಯದ ಗೊಂದಲದಲ್ಲೇ ಸುಖ,
ಶೋ ಆಫುಗಳಿಗಷ್ಟೇ ಲೆಕ್ಕ.
- ಸಂತೋಷಕುಮಾರ ಅತ್ತಿವೇರಿ
Comments