top of page

ನಾನು ಸತ್ತರೆ ನೀವು ಅಳುವಿರಿ

ನಾನು ಸತ್ತರೆ ನೀವು ಅಳುವಿರಿ

ನಿಮ್ಮ ಕೂಗು ನನಗೆ ಕೇಳಿಸದು

ನನ್ನ ನೋವಿಗೆ ಈಗಲೇ ಮರುಗಲಾಗದೇ


ನೀವು ಹೂಮಾಲೆ ಹೊದಿಸುವಿರಿ

ನೋಡಲಾದೀತೇನು ನನಗೆ

ಚೆಂದನೆಯ ಹೂವೊಂದ ಈಗಲೇ

ನೀಡಲಾಗದೇ


ನನ್ನ ಗುಣಗಾನ ಮಾಡುವಿರಿ

ನನಗೆ ಕೇಳೀತೇ ಹೇಳಿ

ಒಂದೆರಡು ಹೊಗಳಿಕೆಯ ಮಾತು

ಈಗಲೇ ಆಡಲಾರಿರೇ ..


ನನ್ನ ತಪ್ಪುಗಳನ್ನು ಮನ್ನಿಸುವಿರಿ

ನನಗರಿವಾಗುವುದೇ ಇಲ್ಲ

ಜೀವ ಇರುತ್ತಾ ಕ್ಷಮಿಸಲಾಗದೇ ...


ನನ್ನ ಅನುಪಸ್ಥಿತಿಗೆ ಕೊರಗುವಿರಿ

ನನಗೆ ತಿಳಿಯುವುದೇ ಇಲ್ಲ

ಈಗಲೇ ಭೇಟಿ ಮಾಡಲೇನು ..


ನನ್ನ ನಿರ್ಗಮನದ ಸುದ್ದಿ ತಿಳಿಯುತ್ತಲೇ

ಮನೆಯತ್ತ ಧಾವಿಸುವಿರಿ ಶ್ರದ್ಧಾಂಜಲಿ ಹೇಳೋ ಬದಲು ಈವಾಗಲೇ

ಸುಖ ದುಃಖ ಹಂಚಿಕೊಳ್ಳಲಾಗದೇನು .


ಮಿಂಚಿ ಹೋಗುವ ಮುನ್ನ ಹಂಚಿ

ಬಾಳುವ ಬದುಕು ಸಹ್ಯವಲ್ಲವೇನು .....


✒️ ಡಾ.ಸಿದ್ಧಲಿಂಗಯ್ಯನವರ ಭಾವನಾತ್ಮಕ ಕವಿತೆ.

108 views1 comment

1 Comment


balakrishna.kalbag
Aug 11, 2023

ರಾಷ್ಟ್ರಕವಿ ಶ್ರೀ ರವೀಂದ್ರನಾಥ್ ಟ್ಯಾಗೋರರ when I am Dead ಎನ್ನುವ ಕವಿತೆಯ ಕನ್ನಡ ಭವಾನುವಾದ.

Like

©Alochane.com 

bottom of page