ನೀನಿಲ್ಲದೆ ನಾನಿಲ್ಲ
- shreepadns
- Nov 11, 2023
- 1 min read
ಸ್ನೇಹ
ನೀನಿಲ್ಲದೆ
ನಾನಿಲ್ಲ
ನಿನ್ನಾಸರೆ
ಜೊತೆಗಿರೆ
ಜನ್ಮ ಪಾವನ
ನೀನಿದ್ದಷ್ಟೂ
ನಾನೇರುವೆ
ಪ್ರೀತಿ,ಪ್ರೇಮದ ಏಣಿ
ಸುಖ-ಶಾಂತಿ
ಬಾಳಲಿ
ನೀನದಕೆ ಸಾಕ್ಷಿ
ಸಕಲ ಜೀವಿಗಳು
ಬದುಕಿಹವು
ನಿನ್ನಾಸರೆಯಲಿ
ನೀನು
ಮುಗುಳ್ನಕ್ಕರೊಂದು
ಮುನಿದರೊಂದು
ಬಾಳಿನ ತಿರುವು
ಬಾಳ ದಾರಿಗೆಲ್ಲ
ಬೆಳಕು ನೀನು
ಎಸ್ಸೆಮ್ಮೆಸ್
ಗದ್ದಲದಲಿ
ನಿನ್ನಾಳನರಿಯಲಸಾಧ್ಯ
ಎಲ್ಲ ಬೂಟಾಟಿಕೆ
ಎಸ್ಸೆಮ್ಮೆಸ್ ಭಾಷೆ
ಅಪೂರ್ಣ
ನಿನ್ನದೂ ಅದೇ
ಸ್ಥಿತಿ!
ಸ್ನೇಹಿತರಾರು
ಎಂಬುದೇ ಗೊಂದಲ
ನಾಗಪ್ಪ ಇರುವೆ
ಒಪ್ಪಿರುವೆ
ದೂರಾಗದಿರು
ಸ್ನೇಹ
ನೀನಿಲ್ಲದೆ ನಾನಿಲ್ಲ
ಬಡವರಿರಲಿ
ಶ್ರೀಮಂತರಿರಲಿ
ನಿನಗಿಲ್ಲ ಭೇದ
ಅದಕ್ಕೇ
ನೀನಿರದಿರೆ
ನನಗದೇ ಖೇದ!
ಪ್ರೊ.ವೆಂಕಟೇಶ ಹುಣಶಿಕಟ್ಟಿ
Comments