top of page

ನಿನ್ನರಿವ ಪರಿ

ಹಾವು ಹೆಡೆಯೆತ್ತಿ ನಿಂತೊಡೆ ಹೊಂಗೆಮರವೆನಬಹುದೆ

ಚೇಳ ಕೊಂಬಿಗೆ ಜೀಕಿ ಜೋಕಾಲಿಯೆನಬಹುದೆ

ಕಳ್ಳಿ ಕನಿಕರಿಸಿ ಸುರಿಸಿದರೆ

ಕುಡಿವ ಹಾಲದೊಗಬಹುದೆ

ಮೊಸಳೆ ಬಾಗಿಸಿದರೆ ಬೆನ್ನ

ದೋಣಿಯೆಂದೆನಬಹುದೆ

ದುರುಳ ಮತಿಗಳ ದೂರೀಕರಿಸಿ

ನಿನ್ನರಿವ ಪರಿಯ ತೋರೋ ಅಂತರಾಧೀಶಾ



- ಕವಿತಾ ಹೆಗಡೆ ಅಭಯಂ

30 views0 comments

Kommentarer


bottom of page