ಕಳೆದ ವಾರದ ಕೊನೆಯಲ್ಲಿ
ಫ್ಲೈ ಓವರಿನ ಮೇಲೆ ಆಸೆಗೆ
ಪ್ಯಾರಾಚೂಟ್ ಕಟ್ಟಿ ಅಲ್ಲಿಂದ ಹಾರಿಸಿದ್ದೆವು
ನಾನು ಮತ್ತು ನನ್ನ ತಮ್ಮ..
ಎಷ್ಟೊಂದು ಕಾರುಗಳು ಅದರ ಮೇಲೆ
ಸುಳಿಯುತ್ತಿದ್ದವು ಚೂರು ಜಾಗ
ಮಾಡಿಕೊಂಡು,ಸುಮ್ಮನೆ ನೋಡುತ್ತಿತ್ತು
ಸೂರ್ಯನದ್ದೊಂದು ಕಾಂತಿ,
ಇನ್ನೂ ನಮ್ಮ ಸುಸ್ತು ಮಾಡಿಕೊಂಡು
ಮಲಗಿದ ಸಿಟಿಯಲ್ಲಿ ಬೆಳಕೇ ಹರಿದಿರಲಿಲ್ಲ,
ಜಾವದಲ್ಲಿ ಸೂರ್ಯ ಸಣ್ಣಗೆ ಬೆಕ್ಕಿನ ಮರಿಯಂತೆ
ಕಣ್ಣು ಬಿಡುತ್ತಿದ್ದ,ಹಾಗೆ ಹಳದಿ ಮಿಶ್ರಿತ ಕೆಂಪು
ಕಲರನು ಒಂದು ಕೋಟ್ ಬಳಿದು..
ವಾಕಿಗೆ ಬಂದ ಜನ ಸೂರ್ಯ ನಮಸ್ಕಾರ
ಹಾಕುತ ನಮ್ಮಂತವರನ್ನು ಧ್ಯಾನಕ್ಕೆ ಕುಳ್ಳಿರಿಸಿ.
ಮಾರ್ನಿಂಗ್ ಬಿಸಿ ಬಿಸಿ ಮಾತಿನಲಿ ಮಗ್ನರಾಗಿದ್ದರು..
ಕ್ಷಣದ ಜಂಜಡದಲ್ಲಿ ಇಂತ ಎಷ್ಟೋ
ಜಾವಗಳನ್ನು ಕಳೆದುಕೊಂಡಿದ್ದೇವಲ್ಲ?
ಎನ್ನಿಸಿತು..
ಲಕ್ಷ್ಮಿ ದಾವಣಗೆರೆ
Commenti