ಬಂಧನ ಬಂಧನ ಬಂಧನ
ಮೂರೇ ದಿನ ರೇಪಿಸ್ಟ್ ಬಂಧನ!
ಬಂಧನ ಮಾತಲ್ಲ ಸ್ವಾಮಿ,
ಮುಂದೇನು?....
ಅವರಿವರ ತಪ್ಪು
ಎತ್ತಿ ತೋರದೆ
ಮತ್ತೆ ಮತ್ತೆ ದುಷ್ಕೃತ್ಯ
ಪುನರಾವರ್ತಿಸದಂತೆ
ತಡೆವ ಬಗೆ ಹೇಗೆ?
ಅಸಹಾಯಕ ಆರಕ್ಷಕ....
ನೇರ ಗುಂಡಿಟ್ಟರೆ.....
ಬುದ್ಧಿಜೀವಿಗಳ ಕೆಂಗಣ್ಣು!....
ಅಡ್ಡಗೋಡೆಯ ದೀಪ
ರಾಜಕಾರಣಿಗಳು!.....
ಅಧಿಕಾರ, ಖಾತೆ ಅಂತಾ
ಅವರದೂ ಒಂದು ರೀತಿ
ತೀರದ ದಾಹ........
ಲೋಕದ ಡೊಂಕು ತಿದ್ದುವದೆಂತು.....?
ಹಾಗಾಗಿ.....
ನೀನು ಗಂಡಲ್ಲ.....!
ಮುಳ್ಳ ಮೇಲಿನ ಸೀರೆ......
ಮಾನ ಭಯದಲ್ಲೇ ಕಾಲಕಳೆವ
ಸರಕಾದಳು ಹೆಣ್ಣು!
ಹೀನ ಕೃತ್ಯ ಕಂಡೂ
ತುಂಡರಿಸಲಾಗದ
ನ್ಯಾಯ ವಿಧಾನ, ಬಲು ನಿಧಾನ......
ಹೋರಾಡಿ ಮಣ್ಣಾದರೂ
ತೀರ್ಪು ಹೊರ ಬರದೆ.......
ಒಂದಿನ ಅಪರಾಧಿಗಳ
ಖುಲಾಸೆ!
ಸಾಕ್ಷಿ ಸಾಲದೆ, ನಿರಪರಾಧ
ಸಾಬೀತು!
ಜೈ ನ್ಯಾಯದೇವತೆ,
ಬಡ ಭಾರತಮಾತೆ!
✍ಹೊನ್ನಮ್ಮ ನಾಯಕ
Comments