ನಾನಲ್ಲದ ನಾನೊಂದು
ನನ್ನೊಳಗಡೆ ಅಡಗಿಹುದು.
ನನ್ನನ್ನೇ ಮೀರಿಸುತಾ
ಅಣಕಿಸುತಾ ಹೆದರಿಸುತಿಹುದು.
ನಾನು ನಾನಾಗಲೇ...
ನಾನಲ್ಲದಾ ನೀನಾಗಲೇ?
ಉತ್ತರವೇ ಸಿಗುತ್ತಿಲ್ಲ.
ಪ್ರಶ್ನೆಗಳ ಗೂಡಿನಲಿ.
ಮನದ ಅಂಧಕಾರವು ನೀನು
ಕೋಪ, ಮದ, ಮತ್ಸರ ನೀನು
ಮನದಲಿ ತುಂಬಿರುವ ವಿಷವು ನೀನೇ.
ದೂರವಾಗು ನನ್ನಿಂದ ನೀನು.
ಮೌನವಾಗಿರಲು ಬಿಡು
ಮನದ ಮಾತ ಕೇಳಲು ಕೊಡು
ನಾನು ನಾನೇ ಆಗಿರಲು ಬಿಡು
ನಿನ್ನಿಂದ ನನಗಷ್ಟು ಮುಕ್ತಿ ಕೊಡು.
ನಾನಾಗುವೆನು ನಾನು
ಏಕಾಂತದಲಿ ದೂರವಾಗಿರು ನೀನು.
ಮೌನ ಮಾತಾಗಲಿ... ಮನವು ಬೆಳಕಾಗಲಿ.
ಅರಿವಿನ ಅಮೃತ ನನಗಿರಲಿ.
ಕವಿತಾ ಗಿರೀಶ ಶಾರ್ಜಾ
Comments