ಮನದಂಗಳದಲಿ ಆಡುತ ನಲಿಯುತ
ಪ್ರೀತಿಯ ನೀಡಿದೆ ನೀ ನಲ್ಲೇ.
ರವಿ ಏಳುವ ಮುನ್ನವೇ ಮನೆ ಶೃಂಗರಿಸುತ
ಮನೆ ಬೆಳಗುವ ಸತಿ ನಾ ಬಲ್ಲೆ.
ಇರುವುದು ನದಿಯಲಿ ಉಬ್ಬರ ಇಳಿತ
ಅದಕೆ ಕಾರಣ ಗುರುತ್ವವಂತೆ.
ಬಾಳಿನ ಸಾಗರ ಸಿಹಿಕಹಿ ಸೆಳೆತ
ಆದರೂ ನಗು ಹುಣ್ಣಿಮೆಯಂತೆ.
ಮಧುರ ಬಾಂದವ್ಯಕೆ ನೀಡಿದೆ ಸಹಮತ
ಬದುಕಿನ ಹೊಂಗನಸ ನೀ ತಂದೆ.
ಮಾಯದ ಲೋಕದ ಅಪ್ಸರೆ ಖಂಡಿತ
ನಿನ್ನಯ ನೋಡುತ ಮತ್ಸರವಂತೆ.
ಒಲವಿನ ಉಡುಗೊರೆ ನಿನ್ನಲಿ ಬಯಸುತ
ನನ್ನಯ ದೇಹದ ಉಸಿರಂತೆ.
ಎಂದೋ ಮಾಡಿದ ಪುಣ್ಯದ ಫಲಶ್ರುತಿ
ದೇವರೇ ನೀಡಿದ ನೀ ಗುಣವಂತೆ.
ಅರುಣ.ಗೌಡ.ಜೂಗ
Comentários