top of page

ನೋಟ ನಂಬಿಕೆ ವಾಸ್ತವ

*ನಂಬಿಕೆ, ವಾಸ್ತವಗಳ ತೆರೆಯ ಅಂಚಲಿ ನಿಂತು ಕಂಡ ನೋಟ*

ಒಂದು ಸಂಖ್ಯೆಯ (ಉದಾ:1ನ್ನೇ ಇಟ್ಟುಕೊಳ್ಳೋಣ, ಬೇರೆ ಸಂಖ್ಯೆಯಾದರೂ ಅಡ್ಡಿಯಿಲ್ಲ) ನಾಲ್ಕು ಮೂಲೆಗಳಲ್ಲಿ ನಿಂತು ನೋಡಿದರೆ,ಎಲ್ಲರಿಗೂ ಒಂದೇ ರೀತಿಯಾಗಿ ಕಾಣದು.ಅವರೆಲ್ಲರೂ 1 ಅಂಕಿಯ ಬಗ್ಗೆ ತಿಳಿದವರಿದ್ದರೆ,ಅದು 1 ಎಂದೇ ಹೇಳುವರು.ಆದರೆ,ಅದರ ಹೊರ ರೂಪ ಮಾತ್ರ ಒಂದೇ ತರ ಕಾಣದು.ಕೆಳಗಡೆ ನಿಂತವರಿಗೆ ಸರಿಯಾಗಿ ಕಂಡರೆ,ಆಚೀಚಿನವರಿಗೆ ಸಂಖ್ಯೆಯ ತಲೆಯ ಕಡೆಗೆ ನಿಂತವರಿಗೆ ಕಾಣುವ ಬಾಹ್ಯ ರೂಪ ಮಾತ್ರ ಬೇರೆಬೇರೆ. (ಬೇಕಾದರೆ,ಒಂದು ಅಂಕಿಯನ್ನು ನೆಲದಲ್ಲಿ ಬರೆದು,ನಾಲ್ಕು ಕಡೆಯಲ್ಲೂ ನಿಂತು ನೋಡಬಹುದು.ಹೊರರುಪ ಬೇರೆಬೇರೆ ರೀತಿ ಕಾಣದಿದ್ದರೆ ಅಂಕಿಯನ್ನು ಸೂಕ್ಷ್ಮವಾಗಿ ಗಮನಿಸಿಲ್ಲವೆಂದೇ ಅರ್ಥ).

ಕೆಲವು ವಿಚಾರಗಳು ಕೂಡ ಹಾಗೆಯೇ.ಅದನ್ನು ಮೊತ್ತಮೊದಲಿಗೆ ಹೇಳಿದ,ಅದನ್ನು ಕೇಳಿಯೋ ಓದಿಯೋ ನಂಬುವ ಜನರ ಪಾಲಿಗೆ ಅದು ವಾಸ್ತವ.ಈ ಮೊದಲೇ ತಮ್ಮದೇ ಆದ ಧೋರಣೆಯನ್ನು ಇಂತಹ ವಿಷಯಗಳ ಬಗ್ಗೆ ನಂಬಿರುವವರಿಗೆ ಮತ್ತು ಅದು ನಿಜವೆಂದು ದೃಢವಾಗಿ ಒಪ್ಪುವವರಿಗೆ ಅದರ ಬಗ್ಗೆ ಬೇರೆ ರೀತಿಯ ಅನಿಸಿಕೆಗಳು ಹೊರಹೊಮ್ಮಿದರೆ,ಅವರೂ ಅದನ್ನು ಒಪ್ಪುವುದಿಲ್ಲ. ಯಾಕೆ ಹೀಗೆ? ಅವರವರ ಭಾವಕ್ಕೆ ಅನುಗುಣವಾಗಿ ಒಬ್ಬೊಬ್ಬರೂ ಒಂದು ವಿಷಯವನ್ನು ಗ್ರಹಿಸುವುದೇ ಇದಕ್ಕೆ ಕಾರಣ.ಎಲ್ಲಾ

ವಿಚಾರಗಳೂ ಅದನ್ನು ಪ್ರತಿಪಾದಿಸಿದವರಿಗೆ, ಅ ವಿಷಯಗಳನ್ನು ಪ್ರತಿಪಾದಿಸಿದ್ದಕ್ಕೆ ಕಾರಣವಾದ ಹಿನ್ನಲೆಯಲ್ಲಿ ಅದು ಸರಿರಲಯಾದದ್ದೇ‌.ಅಂತಹ ಹಿನ್ನಲೆನ್ನು ಗಮನದಲ್ಲಿಟ್ಟುಕೊಂಡೇ ಅದರ ಓದುಗರು ಸಹೃದಯರಾಗೇ ಓದಿದರೆ,ಅದರ ಅರ್ಥ ಸರಿಯಾಗಿಯೇ ಆಗುವುದು.ಅದರ ಬದಲಿಗೆ ಓದುಗರು ಈ ಮೊದಲೇ ಆದ ನಿಲುವುಗಳನ್ನು ಒಂದು ವಿಷಯದ ಬಗ್ಗೆ ಹೊಂದಿದ್ದು,ಅದರ ಬಗ್ಗೆಯೇ ಬೇರೊಬ್ಬರು ಒಂದು ವಿಷಯದ ಕುರಿತು ತಾನು ಗ್ರಹಿಸಿದ್ದಕ್ಕಿಂತ ಬೇರೆಯದ್ದೇ ರೀತಿಯಲ್ಲಿ ಹೇಳಿದರೆ,ಅದರ ಬಗ್ಗೆ ಸಹಮತ ಹೊಂದಿರಬಹುದು,ಅದರ ಬಗ್ಗೆ ಭಿನ್ನಾಭಿಪ್ರಾಯ ಹೊಂದಬಹುದು ಇಲ್ಲವೆ ಚೂರೂ ಒಪ್ಪದೇಹೋಗಬಹುದು.ಇದಕ್ಕೆ ಕಾರಣ,ಒಬ್ಬೊಬ್ಬರೂ ತಮ್ಮದೇ ದೃಷ್ಟಿಕೋನ ಹೊಂದಿರುವುದು ಮತ್ತು ಅದೇ ದೃಷ್ಟಿಯಿಂದ ಬೇರೊಬ್ಬರು ಪ್ರತಿಪಾದಿಸುವ ವಿಷಯದ ಬಗ್ಗೆ ಸಮರ್ಥಿಸುವುದು,ವಿಮರ್ಶಿಸುವುದು ಇಲ್ಲವೆ ಪೂರ್ಣ ಒಪ್ಪದೇ ಹೋಗುವುದು.ಅದೇನೆ ಇರಲಿ,ಹೊಸ ವಿಷಯ ಪ್ರತಿಪಾದನೆ,ವಿಮರ್ಶೆ, ಖಂಡನೆ,ಸಮರ್ಥನೆ ಇವೆಲ್ಲವೂ ಹೊಸ ವಿಚಾರಗಳು ಬದುಕಿಗೊಂದು ನಿರಂತರ ಚಲನೆ ತಂದಿವೆ.

ನುಣುಪಾದ ರಸ್ತೆಯಲ್ಲಿ ಒಂದೇ ಬಗೆಯ ವಾಹನವನ್ನು ಓಡಿಸಿದರೂ ಎಲ್ಲರೂ ಒಂದೇ ರೀತಿಯಲ್ಲಿ, ವೇಗದಲ್ಲಿ ಓಡಿಸುವುದಿಲ್ಲ.ವಾಹನಗಳು ಓಡಾಡಲಿ,ಅಪಘಾತಗಳಾದಂತೆ.ಈ ಬದುಕಿನ ದಾರಿಯಲ್ಲಿ ಬರುವವರೂ ಹೊಸ ವಿಚಾರಗಳನ್ನು ಪ್ರತಿಪಾದಿಸಲಿ,ಸಂಘರ್ಷ ಆಗದಂತೆ.

*ಹಳೆಯ ಹೊಸದರ ಸಂಗಮ*

*ವರ್ತಮಾನದ ಬಾಳಿನ ಅಂಗಣದಲಿ ಆಗಲಿ*

ಬಾಳ ಅಂಗಣದಲಿ ವಿಚಾರಗಳೆಂಬ ಮಕ್ಕಳು ಖುಶಿಖುಶಿಯಾಗಿ ಆಡಿಕೊಂಡಿರಲಿ,

ನಿರಂತರ.

*ಗಣಪತಿ ಗೌಡ, ಹೊನ್ನಳ್ಳಿ*

4 views0 comments

Comments


bottom of page