top of page

ನನ್ನ ಕೆಲ 'ಹೈಕು'ಗಳು

( ಸಾಮಾನ್ಯವಾಗಿ ಹೈಕುಗಳಿಗೆ ಹದಿನೇಳು ಅಕ್ಷರಗಳನ್ನು ಬಳಸಲಾಗುತ್ತದೆ. ನಾನು ಆ ಮಿತಿಯನ್ನು ಇಟ್ಟುಕೊಂಡಿಲ್ಲ. )


* ಬಾಯ್ದೆರೆದ ಭೂಮಿಗೆ

ಮಳೆ ಹನಿಯ

ಮಧುರ ಚುಂಬನ


* ಹಣ್ಣೆಲೆ ಉದುರಿತು

ಹಸಿರೆಲೆ ನಗಲಿಲ್ಲ

ನಾಳೆಯ ನೆನಪಾಗಿ


* ನಡೆಯುವವ

ಎಡವಿ ಬಿದ್ದ

ಕುಳಿತವನ ಮೇಲೆ


* ಕುದಿವ ಮನದಲ್ಲಿ

ನೂರಾರು ಕಥೆಗಳು

ತಲೆಬರೆಹವೇ ಇಲ್ಲ


* ಬದುಕಿನ ಪಾಟಿಯ

ಮೇಲೆ ಒಂದಿಷ್ಟು

ನೆನಪಿನ ಗೀರುಗಳು


* ಭತ್ತದ ಗೊಂಚಲು

ನೆಲಕೆ ಬಾಗಿತು

ಕೃತಜ್ಞತೆ ಸೂಚಿಸಲು


* ಮೋಡ ನೆಲದಿಂದ ತಂದ

ನೀರು ನೆಲಕೇ ಸುರಿಸಿ

ಋಣ ತೀರಿಸಿತು


* ಬಾನ ಕಪ್ಪು ಮೊಗದಿ

'ಮಿಂಚಿ'ತು

ಬಿಳಿ ಹಲ್ಲುಗಳ ನಗೆ


* ಸಾವಿಗಿಲ್ಲ ಸಂಬಂಧಿಕರು

ಸಮಭಾವ ಸಮಚಿತ್ತ

ಕರ್ತವ್ಯದತ್ತ

- ಎಲ್. ಎಸ್. ಶಾಸ್ತ್ರಿ

2 views0 comments

Comments


bottom of page