ಮಳೆ ಚಳಿಯ ಮುಸುಕಲ್ಲಿ
ಬಂತು ದೀಪಾವಳಿ.
ಮನದ ಕತ್ತಲೆಯ ಳಿಯೆ
ಬೆಳಗಿ ಪ್ರೀತಿಯ ಪ್ರಣತಿ
ನುಡಿಯಲ್ಲಿ ಕಿಡಿಸಿಡಿವ ಹಗೆಯ
ಹೊಗೆಯಳಿದು
ಮುಗುಳ್ನೆಗೆಯ
ಕುಡಿಯೊಡೆದು
ಎದೆಯ ಹಬ್ಬೀತು
ಒಂದು ಹೂನಗು
ತುಟಿಯ
ಅಂಚಲ್ಲಿ ಬಿರಿಯೆ
ಅಲ್ಲೊಂದು ಮೂಡೀತು ಮಧು
ತುಂಬಿ ನುಡಿಯು
ನಾನು ನೀನೆಂಬ
ಅಹಮಿಕೆಯ ಒಗ
ಹದವಾಗಿ ರಸತುಂಬಿ
ಫಲವ ತೂಗೀತು
ಮೊರೆವ ಮಂಜುಳ
ರವದ ತೊರೆಗಳು
ನಮ್ಮ ಹೃದಯವ ತೊಯ್ಯಲಿ
ಬಾಗಿಬಳುಕುವ
ತುಂಬುತೆನೆಗಳ
ವಿನಯ ಶಿರದಲಿ
ನೆಲೆಸಲಿ
ಮಿನುಗು ತಿಹ ನಕ್ಷತ್ರ ತೇಜವು
ನಮ್ಮ ಕಂಗಳ ಬೆಳಗಲಿ
ಬದ್ಧತೆಗೆ ಮೈಯಾಂತ
ಬಲಿಚಲ
ನಮ್ಮ ಬದುಕಿಗು
ಸಲ್ಲಲಿ
ಗಜಾನನ ಹೆಗಡೆ
Comments