2020 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ದೀಪ್ತಿ ಭದ್ರಾವತಿಯವರ "ಅಷ್ಟೇ" ಎಂಬ ಹಸ್ತಪ್ರತಿಗೆ ದೊರೆತಿದೆ. ಕವಿ, ವಿಮರ್ಶಕರಾದ ಮಮತಾ ಸಾಗರ ಮತ್ತು ಜಿ.ಪಿ ಬಸವರಾಜು ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು. ಈ ಪುರಸ್ಕಾರವು ಹತ್ತು ಸಾವಿರ ನಗದು ಹಾಗೂ ಪ್ರಶಸ್ತಿ ಪಲಕವನ್ನು ಒಳಗೊಂಡಿದೆ.
ಕವಿ ಪರಿಚಯ:ದೀಪ್ತಿ ದಕ್ಷಿಣಕನ್ನಡದ ಮರವಂತೆಯವರು, ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ, ಕುವೆಂಪು ವಿ.ವಿಯಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಹಾಗೂ ಹಿಂದಿ ವಿಶಾರದ
ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕಾಗದದ ಕುದುರೆ, ಗ್ರೀನ್ ರೂಮಿನಲ್ಲಿ, ಆ ಬದಿಯ ಹೂವು, ಗೀರು ಎಂಬ ನಾಲ್ಕು ಪುಸ್ತಕಗಳನ್ನು
ಪ್ರಕಟಿಸಿದ್ದಾರೆ. ಇವರ ಕೃತಿಗಳು ಈಗಾಗಲೇ ಮಾಸ್ತಿ ಕಥಾ ಪ್ರಶಸ್ತಿ, ಗೀತಾ ದೇಸಾಯಿ ದತ್ತಿನಿಧಿ ಪ್ರಶಸ್ತಿ, ಮುಂಬೈ ಸುಶೀಲಾ ಶೆಟ್ಟಿ ಸ್ಮಾರಕ ಪ್ರಶಸ್ತಿ, ಶಾರದಾ ವಿ ರಾವ್ ದತ್ತಿನಿಧಿ ಪ್ರಶಸ್ತಿ, ಹರಪನಹಳ್ಳಿ
ಭೀಮವ್ವ ಪ್ರಶಸ್ತಿ, ಮಂಡ್ಯದ ಬಿ.ಎಂ.ಶ್ರೀ ಕಾವ್ಯ ಪ್ರಶಸ್ತಿ, ಸಂಕ್ರಮಣ ಹಾಗೂ ಸಂಚಯ ಕಾವ್ಯ ಬಹುಮಾನ, ಚೇತನಧಾರಾ ಟ್ರಸ್ಟ್ ಕಾವ್ಯ ಪ್ರಶಸ್ತಿ, ಗುರುಸಿದ್ಧ ಬಸವಶ್ರೀ ಪ್ರಶಸ್ತಿ, ಡಾ. ಪಾಟೀಲ
ಪುಟ್ಟಪ್ಪ ಪ್ರಶÀಸ್ತಿಗಳನ್ನು ಪಡೆದುಕೊಂಡಿವೆ. ವಿಭಾ ಸಾಹಿತ್ಯ ಪ್ರಶಸ್ತಿ ಸಮಿತಿಯು ದೀಪ್ತಿ ಭದ್ರಾವತಿಯವರನ್ನು ಅಭಿನಂದಿಸುತ್ತದೆ.
ತಮ್ಮ ವಿಶ್ವಾಸಿಗಳು,
ಸುನಂದಾ ಮತ್ತು ಪ್ರಕಾಶ ಕಡಮೆ
(ಸಂಚಾಲಕರು, ವಿಭಾ ಸಾಹಿತ್ಯ ಪ್ರಶಸ್ತಿ-2020)
Comments