top of page

ತೊಟ್ಟು-೩೦೦

ಬತ್ತದ ತೊರೆ

------------------

ಹಂತಗಳ

ಮೀರಿದ,

ಅನಂತಗಳ

ಸಾರಿದ,

ನಿರಂತರಕೆ

ನಿರಂತರ,

ಅನುಭವದ

ಒರತೆ;

ಮೊಗೆದಷ್ಟೂ

ಉಕ್ಕುವ

ತೆಗೆದಷ್ಟೂ

ಮಿಕ್ಕುವ,

ಗುಪ್ತಗಾಮಿನಿಗುಂಟೆ

ಜಲದ

ಕೊರತೆ?


ಡಾ. ಬಸವರಾಜ ಸಾದರ.

 
 
 

Comments


©Alochane.com 

bottom of page