top of page

ತೊಟ್ಟು-೨೬೯

ಬಲಿಪಶು

------------

ಬಲಿ-

ಗೊಳ್ಳುವ

ಹರಕೆಯ

ಕುರಿಗೆ

ಕಾಣದು

ಹರಿತ

ಕತ್ತಿ?

ಮೆರವಣಿಗೆಯ

ರಣರಣ

ಗದ್ದಲದಲ್ಲಿ

ಹಸಿರು

ಹುಲ್ಲನಿಟ್ಟು,

ಹಾಕುತ್ತಾರೆ

ಅದನ್ನೇ

ಒಮ್ಮೆ

ಎತ್ತಿ.


ಡಾ. ಬಸವರಾಜ ಸಾದರ

 
 
 

Comments


©Alochane.com 

bottom of page