top of page

ತೊಟ್ಟು- ೨೪೫

ಶಿವಸಂತೂರ್

-------------------

ಸಂತೂರಿನ

ತಂತಿಗಳಲ್ಲಿತ್ತೋ

ಸುನಾದ!

ಶಿವಕುಮಾರರ

ಕೈಗಳಲ್ಲಿತ್ತೋ

ನಿನಾದ!!

ಮೌನವಾದವು

ಎರಡೂ,

ನಿಲ್ಲಿಸಿ

ಅನಾಹತ

ನಾದ,

ಬಯಲಲ್ಲಿ

ಬಯಲಾದವು,

ಸೇರಿ

ನಾದದೇವತೆಯ

ಪಾದ.


ಡಾ. ಬಸವರಾಜ ಸಾದರ

1 view0 comments

Comments


bottom of page