top of page

ತೊಟ್ಟು-೨೧೦

ಅರಿವಿನ ಸಂಕಟ

-----------------------

ಅಡ್ಡ ಹೆಜ್ಜೆ

ಇಟ್ಟಾಗ

ಬೇಡ

ಎನ್ನುತ್ತಾನೆ

ಒಳನಿವಾಸಿ,

ಏನೂ

ಆಗುವುದಿಲ್ಲ

ಹೊಡೀ ಚಕ್ಕಡಿ

ಎನ್ನುತ್ತಾನೆ

ಹೊರ ದಾರಿಯವ;

ಇಬ್ಬರ

ನಡುವೆ ಸಿಕ್ಕು

ಒದ್ದಾಡುತ್ತಾನೆ

ದಾರಿಗಾಣದ

ಅರಿವಿನ

ಮೇಲೂರಿನವ.


ಡಾ. ಬಸವರಾಜ ಸಾದರ

 
 
 

Comments


©Alochane.com 

bottom of page