ತೊಟ್ಟು-೧೧೭

ಬೆವರ ಬೆಲೆ

---------------

ಕೋಟಿಗೇರಿದರೆ

ದೇವರೇ

ನಿನ್ನ ದರುಶನದ

ಬೆಲೆ,

ಕಲ್ಲು-ಕಟ್ಟಿಗೆ-ಮಣ್ಣು,

ಮಿಣಿ-ಸೆಗಣಿ-ಸೇವೆಯ

ಕಾಯಕಗಳಿಂದ

ದಕ್ಕೀತೇ ನನಗೆ

ಆ ನೆಲೆ?

ಬಾ ನನ್ನೊಂದಿಗೆ

ಮಂದಿರದ ಹೊರಗೆ,

ತಿಳಿಸೋಣ

ಬ್ರಹ್ಮಾಂಡ ಭ್ರಷ್ಟರಿಗೆ

ಇಬ್ಬರೂ ಸೇರಿಯೇ

ಬೆವರಿನ ಬೆಲೆ.


ಡಾ. ಬಸವರಾಜ ಸಾದರ

2 views0 comments