top of page

ತೊಟ್ಟು-೧೦೩

ಮನ ಕಟ್ಟು

---------------


ಕಟ್ಟಬಹುದು

ನೂರು ಮನೆಗಳ

ಸಾವಿರ ಸಾಮಗ್ರಿ

ಕೊಂಡು ತಂದು;

ಕಟ್ಟಲಾಗದು

ಮೂರು ಮನಗಳ

ಒಂದೆ ಕಟ್ಟಿಗೆ

ತಂದು,

ಮನೆಯಂತೆ

ಮನಗಳನು

ಕಟ್ಟಿದರೆ ಚಂದ,

ಬಣ್ಣಗಳೆ

ಬೇಕಿಲ್ಲ

ಸಹಜ ಅಂದ.


ಡಾ. ಬಸವರಾಜ ಸಾದರ.

2 views0 comments

Comentários


bottom of page