top of page

ತೊಟ್ಟು-೧೦೦

ಊರಿದ

ನೂರೂ

ಬೀಜ,

ಗಿಡವಾಗಿ,

ಹೂ, ಹಣ್ಣು-ಹಂಪಲ

ಕೊಟ್ಟಾವೆಂಬ

ದುರಾಸೆ

ಇಲ್ಲಿಲ್ಲ;

ಒಂದಾದರೂ

ಮೊಳೆತು,

ಮರವಾಗಿ,

ನೂರಕ್ಕೆ

ಮತ್ತೆ

ಬೀಜವಾದೀತೆಂಬ

ಮಹದಾಸೆಯೇ

ಇಲ್ಲೆಲ್ಲ.


ಡಾ. ಬಸವರಾಜ ಸಾದರ

2 views0 comments
bottom of page