ಜೈ ಶಿವ ಶಂಕರ

ಜೈ ಶಿವ ಶಂಕರನ

ನೀ ನೆನೆ

ಓ ಮನ...,ಹರ

ತ್ರಿಪುರಾಂತಕನನ್ನ!!!


ವ್ಯೋಮಕೇಶಿ ಗಜ

ಚರ್ಮಾಂಬರಧರ

ತ್ರಿಶೂಲ ಪಾಣಿ

ಮೃತ್ಯುಂಜಯನ

ನೀ ನೆನೆ ಓ ಮನ..

ಹರ ತ್ರಿಪುರಾಂತಕನನ್ನ!!!


ಕೈಲಾಸವಾಸ

ಸಾಂಬ ಸದಾಶಿವ

ಗೌರೀಪ್ರಿಯ

ಶ್ರೀ ಗಂಗಾಧರನನ್ನ

ನೀ ನೆನೆ ಓ ಮನ...

ದಕ್ಷಿಣಾ ಮೂರ್ತಿಯನ್ನ

ಸದ್ಗುರು ತ್ರಿಪುರಾಂತಕನನ್ನ!!!


ಮನ್ಮಥ ರಿಪು

ವಿಧು ಭೂಷಣ

ಓಂಕಾರ ಪ್ರಿಯ

ನಿತ್ಯ ಶುದ್ಧನನ್ನ

ನೀ ನೆನೆ ಒ ಮನ..

ವರ ಜಟಾಜೂಟನನ್ನ

ಸದ್ಗುರು ತ್ರಿಪುರಾಂತಕನನ್ನ!!!


          *

(ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು🌹💐🙏🙏🙏💐


ಮಹಾಬಲಮೂರ್ತಿ ಕೊಡ್ಲಕೆರೆ

1 view0 comments