ಜನವರಿ ಇಪ್ಪತ್ತಾರು!
- ಆಲೋಚನೆ
- Jan 26, 2022
- 1 min read
ಜನರ, ಜನರಿಂದ, ಜನಪರ ಪ್ರಜಾಡಳಿತ!
ಸಾರ್ವಕಾಲಿಕ ಸರ್ವ ಮಾನ್ಯ ಆಡಳಿತ!
ನಮ್ಮದೇ ಸಂವಿಧಾನದ ಜಾರಿಯ ದಿನ!
ಭಾರತೀಯರ ಕನಸು ನನಸಾದ ಸುದಿನ!
ಅಂಬೇಡಕರರು ರಚಿಸಿದ ಸಂವಿಧಾನ!
ಪ್ರಜಾಪ್ರಭುತ್ವದ ವ್ಯವಸ್ಥೆಗೆ ವರದಾನ!
ಜನರ,ಜನರಿಂದ, ಜನಪರ ಪ್ರಜಾತಂತ್ರ!
ಸ್ವಯಂಪ್ರಭುತ್ವ ಸಾಧಿಸಲು ದಿವ್ಯ ಸೂತ್ರ!
ವಿಶ್ವ ಮಾನ್ಯತೆಯ ಅನುಪಮ ಸಂವಿಧಾನ!
ಜಾರಿಯಲಿ ಬಂದ ಈ ದಿನ ಮಹಾ ಸುದಿನ!
ಪ್ರತಿ ಪ್ರಜೆಯು ಸ್ವಯಂಪ್ರಭು ಎಂಬ ಪರಿಜ್ಞಾನ!
ಮೂಡಿಸಿದ ಮಹಾನ್ ಚೇತನಗಳಿಗೆ ನಮನ!
ಬೀರಣ್ಣ ನಾಯಕ ಹಿರೆಗುತ್ತಿ
תגובות