top of page

ಚಿತ್ರಾಲೋಚನೆ-6

[ವೃತ್ತಿಯಲ್ಲಿ ವೈದ್ಯರಾಗಿದ್ದು ಪೃವೃತ್ತಿ ಯಲ್ಲಿ ಕಲೆ ಮತ್ತು ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿರುವ ಡಾ. ಡಿ. ಟಿ . ಕೃಷ್ಣ ಮೂರ್ತಿಯವರದು ಬಹುಮುಖ ವ್ಯಕ್ತಿತ್ವ. ಡಾ. ಕೃಷ್ಣಮೂರ್ತಿಯವರು ಕರ್ನಾಟಕ ವಿದ್ಯುತ್ ನಿಗಮದಲ್ಲಿ ಹಿರಿಯ ವೈದ್ಯಾಧಿಕಾರಿಯಾಗಿ ಸುಧೀರ್ಘ ಸೇವೆ ಸಲ್ಲಿಸಿ ಪ್ರಸ್ತುತದಲ್ಲಿ ಬೆಂಗಳೂರಿನಲ್ಲಿ ವಿಶ್ರಾಂತ ಜೀವವನ ನಡೆಸುತ್ತಿದ್ದಾರೆ . ಚಿತ್ರ ಕಲೆಯಲ್ಲಿ ಪಳಗಿದ ಹಸ್ತದವರಾದ ಇವರು ನಿರಂತರವಾಗಿ ಅದರಲ್ಲಿ ತಮ್ಮನ್ನು ತೊಡಿಗಿಸಿಕೊಂಡಿದ್ದಾರೆ. ಉತ್ತಮ ನಟರಾಗಿರುವ ಇವರು ಹಲವು ನಾಟಕಗಲ್ಲಿ ಪಾತ್ರವಹಿಸಿದ್ದಾರೆ. ಹಾಡುಗಾರಿಕೆಯೂ ಇವರ ಮತ್ತೊಂದು ಹವ್ಯಾಸ. ಅಪಾರಟ್ಮೆಂಟ್ ನಲ್ಲಿ ಕನ್ನಡಿಗರಲ್ಲದವರಿಗೆ ಕನ್ನಡ ಪಾಠ ಹೇಳುವ ಮೇಸ್ಟ್ರು ಅಗಿಯೂ ತಮ್ಮನ್ನು ತೊಡಗಿಸಕೊಂಡ ಇವರದು ಕ್ರಿಯಾಶೀಲ ವ್ಯಕ್ತಿತ್ವ. ಚಿತ್ರಾಲೋಚನೆಗೆ ನಾವು ಬಳಸಿದ ಚಿತ್ರ ಅವರೇ ಕಳಿಸಿದ್ದು. ಈಗ ಚಿತ್ರಲೋಚನೆಗೆ ಅವರು ಬರೆದ ಎರಡು ಕಿರುಗವನಗಳು ತಮ್ಮ ಓದಿಗಾಗಿ - ಸಂಪಾದಕ ]


ಆಲೋಚನೆ- ೧

ಹಸೀರೇ ಉಸಿರು!

ಎನ್ನುವುದನು ಮರೆತು

ಹಚ್ಚ ಹರಿದ್ವರ್ಣ ಕಾಡುಗಳನು

ಕಡಿದಿರಿ!

ಕಾಂಕ್ರೀಟ್ ಕಾಡುಗಳನು

ಹಚ್ಚಿದಿರಿ!!

ಅದಕ್ಕೇ

ಕಾಂಕ್ರೀಟ್ ಗೋಡೆಯಲ್ಲೇ

ಚಿಗುರಿದ್ದೇನೆ ನಾನು !!

ಆಲೋಚನೆ-೨

ಕಾಂಕ್ರೀಟ್ ಗೋಡೆ

ಪಕ್ಕದಲ್ಲೇ ಚಿಗುರಿದ ಸಸಿ

ಅಸಲಿಗೆ ಮೊಳೆಯುವ,

ಬೆಳೆಯುವ ನೆಲೆವೇ ಅಲ್ಲ !!

ಪಾತಿಯಲ್ಲಿ ಗೊಬ್ಬರವಿಲ್ಲ

ಹೇಗೆ ಮೊಳೆಯಿತೋ

ಶಿವನೇ ಬಲ್ಲ!!

ಚಿಗುರೊಡೆವ ಹುಮ್ಮಸ್ಸು,

ಸಾಧಿಸುವ ಛಲವಿದ್ದರೆ

ಏನೂ ಅಸಾಧ್ಯವಲ್ಲ!.

೦೦೦=೦೦೦

22 views1 comment

1 commentaire


shreepadns
shreepadns
13 sept. 2020

ಮನ ಮುಟ್ಟಿತು ಕವಿತೆ.ಕಲಾವಿದ,ವೈದ್ಯ ಕೃಷ್ಣಮೂರ್ತಿ ಅವರಿಗೆ ಅಭಿನಂದನೆಗಳು ಗೆಳೆಯ ಶ್ರೀಪಾದನ ಕನಸಿನ ಕೂಸು ಅಂಬೆಗಾಲಿಕ್ಕಿ ಗಮನ ಸೆಳೆಯುತಿದೆ. ಡಾ.ಶ್ರೀಪಾದ ಶೆಟ್ಟಿ.

J'aime
bottom of page