top of page

ಚುಟುಕುಗಳು


"ನನಸು."


ಕಾಣೋಣ ನಾಡಜನ

ಬೆಳೆಯಲೆಂಬ ಕನಸು..

ಕಿತ್ತಾಕುವ ಮನದಿಂದ

ದ್ವೇಷದ ವೈಮನಸು.

ಸಮರಸದ ಜ್ಯೋತಿ

ಬೆಳಗಿಸಲು ನನಸು...

ಸಂತಸದ ನಲಿದಾಟ

ಮರೆಯಾಗಿ ಮುನಿಸು.


"ಹೆಮ್ಮಾರಿ."


ಮೊಬೈಲ್ ನಮಗಿಂದು

ಮಾಹಿತಿಯ ಕಣಜ..

ಬಳಸಲು ಜ್ಞಾನಕ್ಕೆ

ತಪ್ಪಿಲ್ಲ ಮನುಜ.

ಅತಿಬಳಕೆ ತರವಲ್ಲ

ಕೆಡುಕಿಗೆ ರಹದಾರಿ...

ಹಿತಮಿತದಿ ಬಳಸಿ

ತುಳಿವ ಸರಿದಾರಿ.


"ಈದಿನ."


ಚಿಂತಿಸವು ಪ್ರಾಣಿಪಕ್ಷಿ

ನಾಳೆಯನು ಕುರಿತು..

ನಲಿವವು ಜೊತೆಸೇರಿ

ಭವಿಷ್ಯವನು ಮರೆತು.

ಹೇಮನುಜ ಮರೆತಾಕು

ನಾಳೆಯ ಚಿಂತೆ..?

ಸಂತಸದಿ ಮಾಡುನಿ

ಈ ದಿನದ ಸಂತೆ.


"ಇರಲು ಸಿರಿತನ."


ಸಿರಿತನ ಇರುವಾಗ

ಹೇಳುವರು ಎಲ್ಲಾ..

ಹೆದರದಿರಿ ಜೊತೆಯಲ್ಲಿ

ನಾವಿದ್ದೇವೆ ಅಲ್ಲಾ.

ದೂರಾಗ್ವರು ಹಲವರು

ಬರಲು ಆಪತ್ತು...

ನಿನ್ಯಾರೋ ನಾನ್ಯಾರೋ

ಇರದಿರೆ ಸಂಪತ್ತು.


ಸಾತುಗೌಡ ಬಡಗೇರಿ.ಅಂಕೋಲಾ





 
 
 

1 comentario


Dayanand Naik
Dayanand Naik
19 ago 2023

Sir.. nimma barahakke nanna namanagalu.

Me gusta

©Alochane.com 

bottom of page