top of page

ಚುಟುಕುಗಳು


.

"ಒಡನಾಟ."


ಬೆಳ್ಳಗೆ ತೋರುವುದು

ಕಳ್ಳಿಯ ರಸವು...

ಕುಡಿಯದಿರು ಹಾಲಂತ

ತುಂಬಿದೆ ವಿಷವು.

ತಿಳಿಬೇಕು ಗುಣಸಿರಿಯ

ಒಡನಾಟದ ಫಲದಿಂದ..

ಮರೆತರೆ ಹೊಂಡಕ್ಕೆ

ತಳ್ಳುವರು ಹಿಂದಿಂದ.


"ವೃಕ್ಷ ಮಾತೆ."


ಜಗತುಂಬ ಬೆಳಗಿಸಿದೆ

ಹಾಲಕ್ಕಿಗಳ ಹೆಸರು..

ಹಸಿರಿಗಾಗಿ ಮೂಡಿಪಿಟ್ಟೆ

ಮಾತೆಯೇ ನಿನ್ನುಸಿರು.

ಕರುನಾಡಿನ ತುಂಬೆಲ್ಲಾ

ನಿನ್ನದೇ ಗುಣಗಾನ..

ಮೂಡಿಗೇರಿ ಮೆರೆಸುತ್ತಿವೆ

ಮಾನ ಸನ್ಮಾನ.


"ಆರೋಗ್ಯ ಸಿರಿ."


ಆರೋಗ್ಯಸಿರಿ ಭಾಗ್ಯ

ನಮ್ಮದಾಗಲು ಕಂದ..

ನಿಯಮಿತದಿ ವ್ಯಾಯಾಮ

ಮಾಡಿದರೆ ಚಂದ.

ಆರೋಗ್ಯ ಭಾಗ್ಯವೇ

ಅತಿದೊಡ್ಡ ಸಿರಿಯು..

ನಮ್ಮದಾದರೆ ಅದುವು

ಲೋಕಕ್ಕೆ ದೊರೆಯು.


"ಅರಿವು."


ಕಣ್ಣು ಕೆಂಪಾಗಿ

ಇದ್ದಾಗ ತುರಿಕೆ..

ಹೆದರಿಕೆ ಬೇಡಾ

ಇರಲಿ ಎಚ್ಚರಿಕೆ.

ತಕ್ಷಣ ಪಡೆವಾ

ವೈದ್ಯರ ನೆರವು..

ಜನರಲ್ಲಿ ಮೂಡಲಿ

ಕಣ್ಣುಬೇನೆ ಅರಿವು.


ಸಾತುಗೌಡ ಬಡಗೇರಿ.ಅಂಕೋಲಾ


ತಮ್ಮ ಕವನ ಮತ್ತು ಚುಟುಕುಗಳ ಮೂಲಕ ಕ್ರಿಯಾಶೀಲರಾಗಿರು ವಿಶ್ರಾಂತ ಶಿಕ್ಷಕ ಸಾತು ಗೌಡ ಬಡಗೇರಿ ಅವರ ಚುಟುಕುಗಳು ನಿಮ್ಮ ಓದಿಗಾಗಿ. ಸಂಪಾದಕ




272 views1 comment

1 Comment


Dayanand Naik
Dayanand Naik
Aug 07, 2023

Sir nimage nive sarisati adbhuta barahagararu nivu. Nimma barahakke navu yavattu chiraruni. Nimma baraha hige munduvareyali nimage rajyadalli aste alla, deshadallu prasati doreyuvantagali. Jai hind.

Like
bottom of page