ಚುಟುಕುಗಳು
- shreepadns
- Jul 29, 2023
- 1 min read
"ಚಟ."
ದಾಸನಾದರೆ ಚಟಕೆ
ಚಟ್ಟಗ್ಯಾರಂಟಿ ನಿನಗೆ..
ಬೀದಿ ಪಾಲಾಗುವರು
ಮಡದಿಮಕ್ಕಳು ಕೊನೆಗೆ.
ಬೇಡಪ್ಪಾ ವೈರಿಗೂ
ದುರಂತದ ಬದುಕು...
ಕುಡಿತಬಿಟ್ಟರೆ ಸುಖವು
ಕಾಡದೆಂದು ಕೆಡಕು.
"ಸತ್ಯ."
ಪರರ ಉನ್ನತಿನೋಡಿ
ಹೊಟ್ಟೆಯುರಿ ಬೇಡಾ..
ಸ್ಫೂರ್ತಿಯಾಗಲಿ ಅವರ
ಸಾಧನೆಯ ಹಾಡಾ.
ಮತ್ಸರದ ಉರಿಯಲ್ಲಿ
ದಹಿಸಿದ್ದು ಸಾಕು...
ಪ್ರಯತ್ನದಿ ಫಲವಿರುವ
ಸತ್ಯ ಅರಿಯಬೇಕು.
"ನೀನಿರುವಾಗ."
ನೀನಿರುವಾಗ ಚಿಂತೆಯೇತಕೆ
ನೀನಿರಲು ಜೊತೆಗೆ..
ಸಾವಿಗೂ ಭಯವಿಲ್ಲ
ಸಾವಿತ್ರಿಯಾದೆ ನನಗೆ.
ನಲಿಯೋಣ ನೂರ್ಕಾಲ
ಸಮರಸದಿ ಹೀಗೆ...
ಕಾಡದೆಂದು ನೀನಿರಲು
ಚಿಂತೆಯ ಬೇಗೆ .
ಸಾತುಗೌಡ ಬಡಗೇರಿ.
ಅಂಕೋಲಾ ಉ.ಕ
ಕವಿ ಸಾತು ಗೌಡ ಬಡಗೇರಿಯವರು ವೃತ್ತಿಯಲ್ಲಿ ಶಿಕ್ಷಕರಾಗಿ ವಯೋ ನಿವೃತ್ತಿ ಹೊಂದಿರುತ್ತಾರೆ. ಆದರೆ ಪ್ರವೃತ್ತಿಯಲ್ಲಿ ಕವಿಗಳಾಗಿದ್ದಾರೆ. ನನ್ನ ವಿದ್ಯಾರ್ಥಿ ಮಿತ್ರರಾಗಿರುವ ಅವರ ಕವನಗಳು ಸಹೃದಯರ ಮನವನ್ನು ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ.ಅವರ ಚುಟುಕುಗಳು ನಿಮ್ಮ ಓದಿಗಾಗಿ. ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ
Comments