top of page

ಚುಟುಕುಗಳು

ಜಯ ಸಾಧಿಸಿದ ಸಂಯಮ ********************** ಸಹಕಾರವೇ ಜೀವನ ಸಂಯಮವೇ ಮರು ಜನನ ಬರಲಿ ಇಂಥ ಇನ್ನೆಷ್ಟೋ ಕೊರೋನಾ ಎದುರಿಸಲು ಸಿದ್ಧ ಭಾರತದ ಜನ ***********ಹುವೆಂ***†** 

ಮಾಯಾರೂಪಿ ಕರೋನಾ! ********************** ನಿನಗುಂಟಂತೆ ಹದಿನಾಲ್ಕು ರೂಪ ಅದಕ್ಕೇ ಮಾಡುತಿರುವೆ ರಂಪ! ಮಿತಿಮೀರಿದೆ ಜನರ ಕೋಪ ಅಡಗಿಸದೆ ಬಿಡರು ನಿನ್ನ ಅಟಾಟೋಪ! *********ಹುವೆಂ******** ಇನ್ನೆಷ್ಟು ದಿನ? ************ ಮುಗಿದಿಲ್ಲವೆ ನಿನ್ನ ಅಟ್ಟಹಾಸ ನೀಡಿದೆ ನೀ ಒಳ್ಳೇ ಅಭ್ಯಾಸ ಮಾಡಿದೆ ಎಷ್ಟೆಲ್ಲ ಆಭಾಸ ಕೊರೋನಾ,ಬಿಟ್ಟುಬಿಡು ನಿನ್ನ ದುರಾಭ್ಯಾಸ *********ಹುವೆಂ***†***** ಅನಿವಾರ್ಯ ************ ನಮ್ಮೂರು ಇಷ್ಟ ನಮಗೀಗ ಬಿಟ್ಟುಬಂದೆವು ಹೋದ ಊರು ಗಂಜಿ ಕುಡಿದರೂ ಇರುವೆವು ಇಲ್ಲೇ ಮುಗಿದರೆ ಸಾಕು "ಕೊರೋನಾ"ಕಾರುಬಾರು ***********ಹುವೆಂ******** ತ್ರಿಶಂಖು ಸ್ಥಿತಿ ************ ಊರಿಲ್ಲ,ಸೂರಿಲ್ಲ, ಹೊಟ್ಟೆಗೂ ಇಲ್ಲ ತ್ರಿಶಂಖು ಸ್ಥಿತಿ ವಲಸಿಗರದು ಆಗಿದೆ ಇಷ್ಟೆಲ್ಲ ಕೊರೋನಾದಿಂದ ಪಾರಾಗಲು ದಾರಿಯಾದರೂ ಯಾವುದು? *********ಹುವೆಂ******** ಜೈಹೊ,ವಾರಿಯರ್ಸ್ ***************** ಯಾವ ದೇವರ ಮಹಿಮೆಗೂ ದಕ್ಕದು ಇದೆಂಥ ಖಿಲಾಡಿ ವೈರಸ್ಸು! ಕೊರೋನಾ ವಾರಿಯರ್ಸ್ ಗಿದೆ ಹಿಡಿತ ಹೊಗಳಲೇಬೇಕು ಅವರ ಶ್ರೇಯಸ್ಸು! *********ಹುವೆಂ********** ತಟ್ಟದಿರದು ಶಾಪ *************** ವಲಸಿಗರಿಗೆ ಕಷ್ಟ ಕೊಟ್ಟದ್ದು ಸಾಕು ಬದುಕಲಿ ಬಿಡು ಅವರು ಪಾಪ ನೋಡು ಕೊರೋನಾ ,ಹೋಗದಿರೆ ನೀನು ತಟ್ಟದಿರದು ನಿನಗವರ ಶಾಪ! *********ಹುವೆಂ********** ಹೌದು,ನೀನೇ ಕೊರೋನಾ! ********************** ಎಲ್ಲೆಲ್ಲಿ ಅಡ್ಡಾಡಿ ಬಂದೆ ಓಡೋಡಿ ವಿಶ್ವದೆಲ್ಲೆಡೆ ನಿನ್ನದೇ ದಂದೆ "ಕೊರೋನಾ ಕೊರೋನಾ" ನೀನೇ ಎಷ್ಟೆಲ್ಲ ಆಭಾಸ ತಂದೆ! ***********ಹುವೆಂ******* ಪರಿಣಾಮ? ************ ಅಧಿಕಾರ,ಅಂತಸ್ತು,ಎಲ್ಲ ಬುಡಮೇಲು ಉದ್ಯೋಗ ಉಳಿದರೆ ಸಾಕೆನಿಸಿದೆ ಬದುಕಬಹುದು ಇದ್ದರೆ ಜೀವ ಇದೆಲ್ಲಿ ಸಾಧ್ಯ "ಕೊರೋನಾ" ಹೋಗದೆ! ***********ಹುವೆಂ******* ಲೇ,ಕೊರೋನಾ----! ***************** ಹೆಚ್ಚಾಯ್ತು ನಿನ್ನ ಹರಾಹುರಿ ಸಾಕುಮಾಡು ಪಿತೂರಿ ನಡೆದಿದೆ ಔಷಧಿಯ ತಯಾರಿ ಹೇಳದೆ ನೀನಾಗುವೆ ಪರಾರಿ ! ********ಹುವೆಂ**********  ಕೊರೋನಾ ಸವಾಲು? ******************* ಎಷ್ಟೆಲ್ಲ ಹಣ ಸುರಿದೆ ಪಾಪ ಕಳೆಯಲೆಂದು ಸಿಗಲಿಲ್ಲ ನಿನಗೆ ನನ್ನಿಂದ ಮುಕ್ತಿ ಏ,ಮಾನವಾ ನೀನರಿಯದಾದೆಯಲ್ಲ ನಾನು ಮಾಡುತ್ತಿರುವ ಕುಯುಕ್ತಿ! ************ಹುವೆಂ*****

ಹುಷಾರು ! *********** ಅಂತೂ ಮುಗೀತು ಮೂರನೇ ಲಾಕ್ ಡೌನ್ ಖುಷಿಯಾಗಿರಬಹುದು ಜನರಿಗೆ ಮೈಮರೆತು ಮೆರೆಯದಿರಿ "ಕೊರೋನಾ" ಹೋಗಿಲ್ಲ ಪೂರ್ತಿ ಹೊರಗೆ ! ***********ಹುವೆಂ**********

ನಗೆಯು ಬರುತಿದೆ ****************

(ಮಾಸ್ಕ್) ಹಾಕುತ್ತ ಬಂದ ದನಗಳಿಗೆ ಬಾಯ್ಕೀಲಿ ಅಲ್ಲಿಲ್ಲಿ ಹುಲ್ಲು ತಿನ್ನಬಾರದೆಂದು ಇಂದು ಮನುಷ್ಯನ ಬಾಯಿಗೆ ಕವಚ ತೋರಿಸಿತು "ಕೊರೋನಾ" ಕಾಲ ಬದಲಾಯಿತೆಂದು! ************ಹುವೆಂ***********

ಕೊರೋನಾ ,ಸಾಕು ದರ್ಪ! *********************** ಮಕ್ಕಳು,ಮುದುಕರು ಇಷ್ಟವಂತೆ ನಿನಗೆ ಯಾಕೆ,ಅವರೆಲ್ಲ ಅಸಹಾಯಕರೇ? ಮರೆತುಬಿಡು ನಿನ್ನ ದರ್ಪವನೆಲ್ಲ ಎಷ್ಟೋ ಜನ ನಿನ್ನನೆದುರಿಸಿ ಗೆದ್ದವರೇ ! ***********ಹುವೆಂ*******

ನಮ್ಮ ಹೋರಾಟ *************** ನಾವೂ ಬಂದೆವೀಗ ಬೀದಿಗೆ ಏನಿದ್ದರೂ ಹೋರಾಟ ಎದುರಾ,ಎದುರಾ ಸೋತುಹೋಗಲೇಬೇಕು "ಕೊರೋನಾ“ ವಹಿಸಬೇಕು ನಾವು ಕಟ್ಟೆಚ್ಚರಾ! ************ಹುವೆಂ**********

-ಪ್ರೊ.ವೆಂಕಟೇಶ ಹುಣಶಿಕಟ್ಟಿ


ಹೊನ್ನಾವರದ ಎಸ್.ಡಿ.ಎಂ.ಕಾಲೇಜ್ನಲ್ಲಿ ರಸಾಯನಶಾಸ್ತ್ರದ ಪ್ರಾಧ್ಯಾಪಕರಾಗಿ ೩೨ ವರ್ಷ (೧೯೬೭-೧೯೯೯)ಸೇವೆ ಸಲ್ಲಿಸಿ ನಿವೃತ್ತರಾದ(೧೯೯೯ ಮೇ ೩೧)ಪ್ರೊ.ವೆಂಕಟೇಶ ಹುಣಶೀಕಟ್ಟಿಯವರು ಸದ್ಯಕ್ಕೆ ರಾಮದುರ್ಗ ತಾಲೂಕಿನ(ಬೆಳಗಾವಿಜಿಲ್ಲೆ) ಹಲಗತ್ತಿ ಗ್ರಾಮದಲ್ಲಿ ವಾಸವಾಗಿದ್ದಾರೆ. ೧೧ ಕಾದಂಬರಿ,೮ ಮಕ್ಕಳ ಕೃತಿಗಳೊಂದಿಗೆ ಸಾಹಿತ್ಯದ  ವಿವಿಧ ಪ್ರಕಾರಗಳಲ್ಲಿ (ಕಥೆ,ಕವನ,ವಿಡಂಬನೆ ಮುಂತಾಗಿ) ೨೮ ಕೃತಿ ಪ್ರಕಟಿಸಿದ ಇವರು ೩ ಸಂಪಾದಿತ ಕೃತಿಗಳನ್ನೂ ಪ್ರಕಟಿಸಿದ್ದಾರೆ.ಇವರು ಪ್ರಕಟಿಸಿದ "ವಿಜ್ಞಾನದ ೧೦೧ ಒಗಟುಗಳು"ಎಂಬ ಪುಸ್ತಕ ೧೧ ಮುದ್ರಣ ಕಂಡಿದ್ದರೆ,"ವಿಜ್ಞಾನದ ಒಗಟುಗಳು" ಎಂಬ ಪುಸ್ತಕ ೫ ಮುದ್ರಣ ಕಂಡಿದೆ (ನವಕರ್ನಾಟಕ ಪಬ್ಲಿಕೇಶನ್ಸ್, ಬೆಂಗಳೂರು).ಮಹಾರಾಷ್ಟ್ರ್ ಸರಕಾರದ ೫ ನೇ ತರಗತಿಯ ಪಠ್ಯ ಪುಸ್ತಕದಲ್ಲಿ ("ಬಾಲ ಭಾರತಿ") ಇವರ ಕೆಲವೊಂದು ವಿಜ್ಞಾನದ ಒಗಟುಗಳು ಸತತವಾಗಿ ೬ ವರ್ಷಗಳ ವರೆಗೆ ಪ್ರಕಟವಾಗಿವೆ. ಅವರ ಚುಟುಕುಗಳು ನಿಮ್ಮ ಓದಿಗಾಗಿ.

-ಸಂಪಾದಕರು.


79 views0 comments

留言


©Alochane.com 

bottom of page