top of page

ಗುರು-ಲಿಂಗ



ಹುಟ್ಟುತ್ತಲೇ

ಗುರು,

ಬೆಳೆಯುತ್ತ

ಲಿಂಗ,

ಬದುಕೆಲ್ಲವೂ

ಸಾಧನಾರಂಗ;

ಮನದೆರೆದು

ಮಾತಾಡಿದ್ದೆಲ್ಲವೂ

ಅನುಭಾವದೆತ್ತರ,

ಕೂಡಲ ಸಂಗನ

ಶರಣನದೇ

ಬಹಿರಂತರಂಗ.


ಡಾ. ಬಸವರಾಜ ಸಾದರ.

--- + ---


ಎಲ್ಲರ ಪ್ರೀತಿಯ ಅನುಭಾವಿ, ಪ್ರಾಧ್ಯಾಪಕ,ಡಾ.ಗುರುಲಿಂಗ ಕಾಪಸೆ ತಮ್ಮ ಇಹದ ಬದುಕಿಗೆ ವಿದಾಯ ಹೇಳಿದರು. ತಮ್ಮ ಬದುಕನ್ನು ಬಾಳುವೆಯಾಗಿ ರೂಪಿಸಿಕೊಂಡ ಪ್ರೊ.ಗುರುಲಿಂಗ ಕಾಪಸೆಯವರು " ಇವನಾರವ ಇವನಾರವ ಎನ್ನದಿರಯ್ಯ ಇವ ನಮ್ಮವ ಇವ ನಮ್ಮವ ಎನಿಸಯ್ಯ" ಎಂಬ ಬಸವಣ್ಣನ ವಚನವನ್ನು ತಮ್ಮ ಬಾಳಿನಲ್ಲಿ ಅನುಷ್ಠಾನಕ್ಕೆ ತಂದವರು. ವಿದ್ಯಾರ್ಥಿಗಳ ಜೊತೆಗೆ,ಸಹೋದ್ಯೋಗಿಗಳ ಒಡನಾಟದಲ್ಲಿ,ಊರ ಜನರ ಜೊತೆಗೆ ಒಡನಾಡುವ ಇವ ನಮ್ಮವ ಇವ ನಮ್ಮವ ಎಂಬ ಭಾವನೆ ಮೂಡಿಸಿದ ಮಹಂತರು. ಹಲಸಂಗಿ ಗೆಳೆಯರ ಒಡನಾಟದಿಂದ ತಮ್ಮ ಚಿಂತನೆಗಳನ್ನು ರೂಪಿಸಿಕೊಂಡ ಅವರು ಪಿಎಚ್,ಡಿ.ಪದವಿಗಾಗಿ ಸಿದ್ಧ ಪಡಿಸಿದ " ಮಧುರ ಚೆನ್ನರ ಜೀವನ ಮತ್ತು ಕೃತಿಗಳ ಸಮೀಕ್ಷೆ " ಒಂದು ಮಾದರಿಯ ಸಂಶೋಧನಾ ಕೃತಿಯಾಗಿದೆ. ನಮ್ಮನ್ನೆಲ್ಲಾ ಕಂಡು ಪ್ರೀತಿಯ ಮಳೆಗಳೆಗರವ ಡಾ.ಗುರುಲಿಂಗ ಕಾಪಸೆ ಇನ್ನಿಲ್ಲ ಎಂದು‌ ಒಂದೆ ಪಟ್ಟಿಗೆ ನಂಬುವುದು ಕಷ್ಟ. ಅವರ ಬಗ್ಗೆ ಅವರ ಶಿಷ್ಯರಾದ ಕವಿ,ಸಂಶೋಧಕ, ವಿಮರ್ಮಾಶಕ, ಮಾತುಗಾರ, ಚಿಂತಕ ಡಾ.ಬಸವರಾಜ ಸಾದರ‌ ಅವರ " ಗುರು- ಲಿಂಗ" ಕವನ ನಿಮ್ಮ ಓದು ಮತ್ತು ಸ್ಪಂದನಕ್ಕಾಗಿ.

ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ

43 views0 comments

Comments


bottom of page