ಗೋಪುರ

ಪ್ರೀಯ ಗೋಪು

ತಬ್ಲಾದ ಮೇಲೆ ಸೋಕಿದರೂ ಸಾಕು ಕೈ

ಜುಮ್ಮೆನ್ನುವುದು ಕೇಳುಗರ ಮೈ

ಕಲ್ಭಾಗದ ಹಳ್ಳ ಕಚ್ಚರ್ಕಿಗಳೆಲ್ಲ ತುಂಬಿ

ನಾದದ ಹೊಳೆ ಹರಿದು ದೊಡ್ಡ ನೆಗಸು

ಕಡಲಾಚೆಗು ನಾದದ ತೆರೆಗಳ ಅಬ್ಬರ

ಉಬ್ಬರ ಸಂಗೀತ ಲೋಕದ ಗೋಪುರ

ದಾ ದಿನ್ನಾ ದಾ ದಾದಾ ದಿನ್ನಾ ತಾಂ ತಿರಿಕಿಟ ತಾ

ನಿನ್ನಿನ ನೆನಪುಗಳ ನಾಳಿನ ಕನಸುಗಳ ತಾ

ಕೊರಳ ದನಿಗೆ ಬೆರಳ ಮಿಡಿತ ಗೋಪು

ಎದೆಯ ತುಡಿತಕೆ ಸಮ್ಮೋಹಕ ಬಡಿತ

ಎಲ್ಲರಂತಲ್ಲ ಹೊಸ ಹೊಸತು ನಿನ್ನದೆ ಛಾಪು

ವೇದನೆ ಸಂವೇದನೆಗೆ ಕಾವು ಕೊಡುವ ಕವಿತೆ

ಮನದೊಳಗಿನ ಮಾತಿಗೆ ತಬ್ಲಾ ಸಾಥ್

ಚಾಂದನಿ ಚಾಂದಸೆ ಹೋತಾ ಹೈ

ಬೆಳೆಯುವವನಿಗೆ ಬಾನೆ ಗಡಿ (ಇಲ್ಲ ಗಡಿಬಿಡಿ)

ಕಲ್ಲು ಕರಗುವ ಸಮಯದಲ್ಲಿ

ಕಲ್ಭಾಗದ ಗೋವಿಂದ ಹೆಗ್ಡೇರ ಮನೆಯಲ್ಲಿ

ಹರಿಯುತಿದೆ ನಾದದ ನದಿ

ಅತ್ತರು ಹಚ್ಚಿದಂತೆ ನಿಮ್ಮ ನಾದದ ಗುಂಗು

ಗೋಪು ಎಂದರೆ ರುಚಿಕಟ್ಟು ಗೋವೆ ಹುಂಗು.


ಶ್ರೀಪಾದ ಶೆಟ್ಟಿ


(ಗೋಪಾಲಕೃಷ್ಣ ಹೆಗಡೆ ಕಲ್ಭಾಗ ಅವರ ಬಗ್ಗೆ ೨೦೦೪ ರಲ್ಲಿ ಬರೆದ ಕವನ)

34 views1 comment