top of page

ಗಾಂಧೀಜಿಯವರು ನಮಗಿಂದು ಏಕೆ ಪ್ರಸ್ತುತ ?

ನಮ್ಮ ದೇಶದ ಇಂದಿನ ಸ್ಥಿಗತಿಗಳನ್ನು ವೀಕ್ಷಿಸಿದಾಗ ಈ ಆಧುನಿಕ ಯುಗದಲ್ಲಿ ಗಾಂಧೀಜಿಯವರ ತತ್ವಗಳು ಏನೇನೂ ಪ್ರಸ್ತುತವಲ್ಲ ಎಂದು ಹೊರನೋಟಕ್ಕೆ ಅನ್ನಿಸಬಹುದು. ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಏಕಾಂಗಿಯಾಗಿ ನಿಂತು ನಿರಾಯುಧರಾಗಿ ಹೋರಾಡಿ ನಮಗೆ ಸ್ವಾತಂತ್ರ್ಯ ಸಿಗಲು ಮುಖ್ಯ ಕಾರಣರಾದರು ಎಂಬ ಕಾರಣಕ್ಕೆ ಅವರನ್ನು ರಾಷ್ಟ್ರಪಿತನೆಂದು ಕರೆಯಲಾಯಿತೇನೋ ನಿಜ. ಆದರೆ ಇಂದು ಅವರನ್ನು ಹೆಚ್ಚುಕಡಿಮೆ ಎಲ್ಲರೂ ಮರೆತೇ ಬಿಟ್ಟಂತೆ ಕಾಣುತ್ತಿದೆ.ಅವರ ಅನುಯಾಯಿಗಳಾಗಿದ್ದವರೇ ಇಂದು ಅವರ ಪ್ರಸ್ತುತತೆಯನ್ನು ಪ್ರಶ್ನಿಸ ತೊಡಗಿದ್ದಾರೆ. ಇಂದು ಅವರನ್ನು ನೆನಪಿಸಿಕೊಳ್ಳುವುದಾದರೆ ರೂಢಿಯಂತೆ ಆಚರಿಸುವ ಅವರ ಜಯಂತಿಯಂದು ಮಾತ್ರ. ಅವರು ಬೋಧಿಸಿದ ಯಾವುದೇ ತತ್ವಗಳನ್ನು ಜನರು ಅನುಸರಿಸುತ್ತಿಲ್ಲ. ಅವೆಲ್ವೂ ಕೇವಲ ಪಠ್ಯಗಳಿಗಷ್ಟೇ ಸೀಮಿತವಾಗಿವೆ. ಸ್ವಾತಂತ್ರ್ಯದ ನಂತರ ದೇಶವು ಹಲವಾರು ಮತೀಯ ಕಲಹ ಮತ್ತು ದಂಗೆಗಳನ್ನು ಕಂಡಿತು. ಸ್ವಾವಲಂಬಿಗಳಾಗಲು ಕರೆಯಿತ್ತ ಗಾಂಧೀಜಿಯವರು ಚರಕದಿಂದ ನೂತು ಖಾದಿ ಧರಿಸಲು ಕರೆಯಿತ್ತರು. ಆದರೆ ಅದನ್ನು ಇವತ್ತು ಒಂದು ಸಾಮಾಜಿಕ ಘೋಷಣೆಯಾಗಿ ಕೂಡಾ ಬಳಸುವುದು ಕಾಣುತ್ತಿಲ್ಲ. ಅವರು ಬೋಧಿಸಿದ ಸಾರ್ವತ್ರಿಕ ಏಳಿಗೆಯನ್ನೂ ಸಂಪತ್ತಿನ ಸಮಾನ ಹಂಚಿಕೆಯನ್ನೂ ಸೂಚಿಸುವ ‘ಸರ್ವೋದಯ’ದ ಪಾಠವೂ ಇವತ್ತು ಯಾರಿಗೂ ನೆನಪಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ ಇಂದು ಇಡೀ ಜಗತ್ತಿನಲ್ಲೇ ಅತಿ ಹೆಚ್ಚು ಶ್ರೀಮಂತನಾಗಿರುವ ವ್ಯಕ್ತಿ ಭಾರತದಲಿದ್ದಾನೆ.

ಇವೆಲ್ಲ ಗಾಂಧಿವಾದವು ಭಾರತದಲ್ಲಿ ಸೃಷ್ಟಿಸಿದ ವಿಪರ್ಯಾಸzದ ಸ್ಥಿತಿಯನ್ನು ತೋರಿಸುತ್ತದೆ. ಇವತ್ತು ಹೆಚ್ಚಿನವರು ಗಾಂಧಿವಾದವನ್ನು ಸುಮ್ಮನೆ ಒಂದು ಘೋಷಣೆಯಾಗಿ ಬಳಸುತ್ತಾರೆ. ಗಾಂಧೀಜಿಯವರ ¨ಗ್ಗೆ ಏನೂ ತಿಳಿಯದ ಜನ ಸಾಮಾನ್ಯರು ಅವರನ್ನು ಒಂದು ಅವತಾರವೆಂದು ನಂಬಿ ಪೂಜಿಸುತ್ತಾರೆ. ಆದ್ದರಿಂದಲೇ ನಾವಿಂದು ನೋಡುವ ಗಾಂಧೀಜಿಯವರ ಭಾವಚಿತ್ರವು ಅರೆನಗ್ನ ಫಕೀರನಂತೆ ಕಾಣುವ, ಅತಿ ಸರಳ ಉಡುಗೆಯಲಿರುವ ಒಬ್ಬ ವೃದ್ಧನೂ ಯೇಸುಕ್ರಿಸ್ತನಂತೆ ಸಾಧು ಸ್ವಭಾವದ ವಿನೀತ ಮುಖಭಾವದÀ ವ್ಯಕ್ತಿಯನ್ನು ತೋರಿಸುತ್ತದೆ. ಆದರೆ ಗಾಂಧೀಜಿಯವರ ಸರಳತೆ ಅಂಥದ್ದಾಗಿರಲಿಲ್ಲ. , ಆ ಚಿತ್ರದಲ್ಲಿರುವ ಗಾಂಧೀಜಿಯವರು ಯುವಕರಿಗೆ ಸ್ಫೂರ್ತಿ ನೀಡುವವರಾಗಿರಲಿಲ್ಲ. ವಾಸ್ತವದಲ್ಲಿ ಗಾಂಧೀಜಿಯವರು ಓರ್ವಸಮರ್ಥ ರಾಜಕಾರಣಿಯಾಗಿದ್ದರು. ಭಾರತದಲಿ ಶಾಂತಿ-ಸಾಮರಸ್ಯಗಳನ್ನು ಸ್ಥಾಪಿಸಿ ದೇಶಕ್ಕೆ ಸ್ವಾತಂತ್ರ್ಯ ತರಲು ಪ್ರಯತ್ನಿಸುತ್ತಿದ್ದ ರಾಜಕಾರಣಿ. ಅವರ ದೃಷ್ಟಿಯಲಿ ಭಾರತದಲಿ ಆಗಬೇಕಾದ ಪರಿವರ್ತನೆಯ ಪ್ರಕ್ರಿಯೆಯು ನೈತಿಕವೂ, ಅಹಿಂಸಾತ್ಮಕವೂ, ಪ್ರಜಾಸತ್ತಾತ್ಮಕವೂ ಅಲ್ಪಸಂಖ್ಯಾಕರ ಹಿgತರಕ್ಷಣೆಯೂ ಆಗಿತ್ತು. ಈ ವಿಚಾರದಲ್ಲಿ ಅವರು ಇಟ್ಟುಕೊಂಡಿದ್ದ ಆದರ್ಶಗಳು ನ್ಯಾಯಯುತವಾದ ಚಿಂತನೆ, ನ್ಯಾಯಯುತವಾದ ನಡತೆ ಮತ್ತು ನ್ಯಾಯುತವಾದ ಪ್ರಯತ್ನಗಳಾಗಿದ್ದವು. ಇದುವೇ ಗಾಂಧಿವಾದದ ಸಾರಸತ್ವ. ಇದನ್ನು ಅರ್ಥ ಮಾಡಿಕೊಂಡರೆ ಇವತ್ತು ಜಗತ್ತಿನಲಿ ಗಾಂಧಿವಾದ ಸತ್ತು ಹೋಗಿಲ್ಲ, ಜೀವಂತವಾಗಿದೆ ಎಂಬುದು ವೇದ್ಯವಾದೀತು.


ಇಂದು ಭಾರತದ ಹೊರಗೆ ನೆಲೆಸಿದ ಬೌದ್ಧ ಧರ್ಮದಂತೆ ಗಾಂಧಿವಾದವೂ ಹೊರದೇಶಗಳಲ್ಲಿ ಪ್ರಭಾವಶಾಲಿಯಾಗಿದೆ. ಜಗತ್ತಿನಲಿ ಗಾಂಧಿವಾದವನ್ನು ಅನುಸರಿಸದ ದೇಶಗಳು ಬಹಳ ಕಡಿಮೆ. ಗಾಂಧೀಜಿಯವರ ಹೆಸರಲ್ಲಿ ಏನಾದರೂ ಚಟುವಟಿಕೆಗಳನ್ನು ನಡೆಸದ, ಸಂಘಟನೆಗಳನ್ನು ಮಾಡದ , ಸಾಧನೆಗಳನ್ನು ಮಾಡದ ದೇಶಗಳೇ ಇಲ್ಲ ಅನ್ನಬಹುದು. ಅಲ್ಲದೆ, ಜಾಗತಿಕ ಮಟ್ಟದಲಿ ಇಂದು ಅಹಿಂಸೆಯ ಅಗತ್ಯದ ಅರಿವು-ಜಾಗೃತಿಗಳು ಉಂಟಾಗಿವೆ. ಗಾಂಧೀಜಿಯವರ ಹೆಸರು ರಾಷ್ಟ್ರ-ಧರ್ಮ-ಜನಾಂಗಳಾಚೆಗೆ ಹೋಗಿ ಆಧುನಿಕ ಶತಮಾನದ ಭವಿಷ್ಯದ ಧ್ವನಿಯಾಗಿ ಹೊರಗೆ ಬಂದಿದೆ. ಇಂದು ಗಾಂಧೀಜಿಯವರು ತಮ್ಮ ಅಹಿಂಸೆಯ ಪಾಲನೆಗೆ ದೃಢವಾಗಿ ಅಂಟಿಕೊಂಡದ್ದಕ್ಕೆ ಮತ್ತು ಅವರ ಉನ್ನತ ಮಟ್ಟದ ಮಾನವೀಯ ಗುಣಗಳಿಗೆ ಎಲ್ಲ ದೇಶಗಳಲ್ಲೂ ಆರಾಧ್ಯ ವ್ಯಕ್ತಿಯಾಗಿ ಬೆಳೆದಿದ್ದಾರೆ..

ಇಂದು ವ್ಯಾಪಕವಾಗುತ್ತಿರುವ ಕೊಳ್ಳುಬಾಕ ಸಂಸ್ಕøತಿಯ ನಡುವೆಯೂ, ಗಾಂಧೀಜಿಯವರು ಜೀವಂತವಾಗಿ ಉಳಿದಿದ್ದಾರೆ. ಅಧ್ಯಾತ್ಮದ ಬಗ್ಗೆ ಅಜ್ಞರಾದ ಮತ್ತು ಲೌಕಿಕ ಸುಖದಲ್ಲೇ ಮೈಮರೆಯುತ್ತಿರುವ ಜನರು ತುಂಬಿದ ಈ ಜUತ್ತಿನಲ್ಲಿ ಅವರ ಸ್ಥಾನ ಮಾ£ಗಳ ಬಗ್ಗೆ ಒಮ್ಮೆ ಮರುಚಿಂತನೆ ಮಾಡಿದರೆ ಖಂಡಿತವಾಗಿಯೂ ಮೂಗಿನ ಮೇಲೆ ಬೆರಳೇರಿಸುವಂತಾಗುತ್ತದೆ. ಆಧುನಿಕ ಜಗತ್ತಿನಲಿ ಗಾಂಧಿಜಿಯವರ ಮಹತ್ವವೇನು? ಅವರ ಯಶಸ್ಸಿನ ಗುಟ್ಟೇನು? ಗಾಂಧಿಜಿಯವರ ಯಶಸ್ಸಿನ ಬಗ್ಗೆ ಭಯ ಭಕ್ತಿಗಳಿಂದ ಮಾತನಾಡುವ ಟಿಬೆಟಿನ ನಾಯಕ ದಲಾಯಿ ಲಾಮಾ ಅವರ ದೃಷ್ಟಿಯಲ್ಲಿ ಅವರು ನಕ್ಷತ್ರ Àಕಾಂತಿಯಿಂದ ಕಂಗೊಳಿಸುವ ಓರ್ವ ತೇಜೋಮೂರ್ತಿಯಾಗಿದ್ದರು. ಅವರು ಹೇಳುತ್ತಾರೆ : ಪ್ರಾಚೀನ ಭಾರತದ ಅನೇಕ ನಾಯಕರು ಅಹಿಂಸೆಯನ್ನು ಒಂದು ತತ್ವವಾಗಿ ಬೋಧಿಸಿದ್ದಾರೆ. ಆದರೆ ಅದು ಕೇವಲ ತಾತ್ವಿಕ ತಿಳುವಳಿಕೆಯಾಗಿ ಮಾತ್ರ ಉಳಿದಿದೆ. ಆದರೆ 20ನೆಯ ಶತಮಾನದಲ್ಲಿ ಗಾಂಧೀಜಿಯವರು ಅದನ್ನು ರಾಜಕೀಯದಲಿ ಪಾಲಿಸಬೇಕಾದ ಒಂದು ಆದರ್ಶ vತ್ವವಾಗಿ ಬಳಸಿ ಅದರಲಿ ಯಶಸ್ವಿಯಾದgರು. ಅದುವೇ ಅವರ ಅಹಿಂಸಾ ತತ್ವದ ವೈಶಿಷ್ಟ್ಯ.’

ಗಾಂಧಿಜಿಯವರು ಮಹಾನ್ ವ್ಯಕ್ತಿಯಾಗಲು ಇದುವೇ ಕಾರಣ.ಜಗತ್ತಿಗೆ ಅವರ ಸಂದೇಶವೂ ಅದುವೇ ಆಗಿತ್ತು. Pಳೆದ ಶತಮಾನದಲಿ ಜಗತ್ತಿನ ಅನೇಕ ದೇಶಗಳು ಮನುಷ್ಯರ ಮೃಗೀಯ ಕ್ರೌರ್ಯದ ಕಾರಣದಿಂದಾಗಿ ಬದಲಾವಣೆಗೊಳಗಾದವು. ರಷ್ಯಾ, ಚೀನಾ, ಟಿಬೆಟ್, ಬರ್ಮಾ, ದಕ್ಷಿಣ ಆಫ್ರಿಕಾ ಮತ್ತು ದಕ್ಷಿಣ ಅಮೇರಿಕಾದಂತಹ ದೇಶಗಳು ಬಂದೂಕಿನ ಹೊಡೆತಕ್ಕೀಡಾಗಿ ವಿನಾಶಕ್ಕೊಳಗಾದವು. ಆದರೆ ಒಂದಿಲ್ಲೊಂದು ದಿನ ಬಂದೂಕಿನ ಬಲವೂ ಜನಸಾಮಾನ್ಯರ ಮನೋಬಲದಿಂದ ಬದಲಾಗುತ್ತದೆ. ದಲಾಯಿ ಲಾಮಾ ಹೇಳಿದರು : ‘ಇಂದು ಲೋಕ ಶಾಂತಿ ಮತ್ತು ಲೋಕ ಯುದ್ಧಗಳ ನಡುವೆ , ಮನೋಬಲ ಮತ್ತು ಭೋಗ ಸುಖಾಪೇಕ್ಷೆಗಳ ನಡುವೆ, ಪ್ರಜಾ ಶಕ್ತಿ ಮತ್ತು ಸರ್ವಾಧಿಕಾರಿ ಕ್ರೌರ್ಯಗಳ ನಡುವೆ ಯುದ್ಧವಾಗುತ್ತಿದೆ. ಈ ಮಹಾಯುದ್ಧಗಳ ವಿರುದ್ಧ ಹೋರಾಡಲು ಜನಸಾಮಾನ್ಯರು ಬಳಸ ಬಹುದಾದ ಏಕ ಮಾತ್ರ ಅಸ್ತ್ರವೆಂದರೆ ಅಹಿಂಸೆ ಮಾತ್ರ.’

ಗಾಂಧೀಜಿಯವರ ಯಶಸ್ಸಿನ ರಹಸ್ಯವನ್ನು ವಿಶ್ಲೇಷಿಸಿದಾಗ ನಮಗೆ ಕಾಣುವುದು ವಿಶ್ವಾಸ, ಕ್ರಿಯಾಶೀಲತೆ ಮತ್ತು ದುರ್ಬಲರ ಬಗೆಗಿನ ಕಾಳಜಿ ಎಂಬ ಮೂರು ಅಂಶಗಳು. ಜನರೊಂದಿಗೆ ಆತ್ಮೀಯವಾಗಿ ಬೆರೆಯುª ಅದ್ಭುತ ಜನಾನುರಾಗಿಯಾಗಿದ್ದ ಅವರು ನಿಜವಾದ ಅರ್ಥದಲ್ಲಿ ಜನ ನಾಯಕರಾಗಿದ್ದರು. ಗಾಂಧೀಜಿಯವರಿಂದ ಸ್ಫೂರ್ತಿ ಪಡೆದ ಜಪಾನಿ ಬೌದ್ಧ ನಾಯಕರಾದ ದಿಸಾಕು ಇಕೇ ದಾ ಹೇಳುತ್ತಾರೆ : ‘ ಅವರ ದೃಷ್ಟಿಯಲ್ಲಿ ಕ್ರಿಯಾಶೀಲ ತೊಡಗುವಿಕೆಯೆಂದರೆ ಬರೇ ಕ್ರಿಯೆ ಆಗಿರಲಿಲ್ಲ. ಬದಲಾಗಿ ತಮ್ಮ ಪ್ರಜ್ಞೆಯ ಒಳಗಿನ ಒತ್ತಡದಿಂದ ಸ್ಫೂರ್ತಿ ಪಡೆದ ಆಧ್ಯಾತ್ಮಿಕ ತತ್ವಗಳ ಪಾಲನೆಯೂ ಆಗಿತ್ತು.’


ಭಾರತದಲ್ಲಿ ಮಾತ್ರವಲ್ಲದೆ ದೂರದ ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರು ಮಾನವ ಹಕ್ಕು ಮತ್ತು ಪೌರ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟಗಳು ಅವರಿಗೆ ಅದ್ಭುತ ಯಶಸ್ಸು ತಂದವು.ದಕ್ಷಿಣ ಆಫ್ರಿಕಾದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೆಲ್ಸನ್ ಮಂಡೇಲಾ ಅವರು ತಮ್ಮ ಜೀವನದಲ್ಲಿ ಗಾಂಧೀಜಿಯವರ ಬೋಧನೆಗಳನ್ನು ಅಳವಡಿಸಿಕೊಂಡದ್ದರಿಂದ ಬಹಳಷ್ಟು ಸಾಧನೆ ಮಾಡಲು ಅವರಿಂದ ಸಾಧ್ಯವಾಯಿತು. ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ದೇ ಕ್ಲರ್P ಕೂಡಾ ಗಾಂಧಿ ತತ್ವಗಳಿಂದ ಪ್ರಭಾವಿತರಾಗಿದ್ದರು. ದಲಾಯಿ ಲಾಮಾ ಮೊದಲ್ಗೊಂಡು ಡೆಸ್ಮೊಂಡ್ ಟು ಟು ಮತ್ತು ಮಾರ್ಟಿನ್ ಲೂಥರ್ ಕಿಂಗ್‍ನಿಂದ ಮೊಲ್ಗೊಂಡು ನೆಲ್ಸನ್ ಮಂಡೇಲಾ ವರೆಗೆ ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಗಾಂಧಿ ತತ್ವಗಳಿಂದ ಪ್ರಭಾವಿತರಾಗಿದ್ದಾರೆ.


ಗಾಂಧೀಜಿಯವರಂತೆ ಮಾರ್ಟಿನ್ ಲೂಥರ್ ಕಿಂಗ್ ಕೂಡಾ ಪ್ರಸಿದ್ಧ ಅಮೆರಿಕನ್ ತತ್ವಜ್ಷಾನಿ ಥೋರೋನ ಆಲೋಚನೆಗಳಿಂದ ಪ್ರಭಾವಿತನಾಗಿದ್ದ : ಮನುಷ್ಯರು ಕೆಡುಕು ಮತ್ತು ನ್ಯಾಯಯುತವಲ್ಲದ ನಿಯಮಗಳನ್ನು ಪಾಲಿಸಬಾರದು’ ಎಂದು. ಇದೇ ತತ್ವವನ್ನಾಧರಿಸಿ ಗಾಂಧೀಜಿಯವರು ಬ್ರಿಟಿಷರ ಆಡಳಿತದ ವಿರುದ್ಧ ಹೋರಾಡಿ ಭಾರತಕ್ಕೆ ಸ್ವಾತಂತ್ರ್ಯ ತಂದಿದ್ದನ್ನು ಲೂಥರ್ ಕಿಂಗ್ ಗಮನಿಸಿದರು. ಥೋರೋನಂತೆಯೇ ಅವರೂ ನ್ಯಾಯಯುತವಲ್ಲದ ಕಾನೂನುಗಳನ್ನು ಮುರಿದಾಗ ಜನರು ಸಂತೋಷದಿಂದಲೇ ಜೈಲಿಗೆ ಹೋಗಬೇಕೆಂದು ಗಾಂಧೀಜಿಯವರು ಹೇಳಿದರು. ಬ್ರಿಟಿಷರನ್ನು ಶಾಂತಿಯುತ ಮಾರ್ಗದಿಂದಲೇ ಪ್ರತಿರೋಧಿಸಬೇಕು, ನೀವು ಜಾಥಾ ಮಾಡಿ, ಬೀದಿಯಲ್ಲಿ ಕುಳಿತುಕೊಳ್ಳಿ, ಮುಷ್ಕರ ಹೂಡಿ, ಬ್ರಿಟಿಷರು ಕೊಟ್ಟ ವಸ್ತುಗಳನ್ನು ಬಹಿಷ್ಕರಿಸಿ, ಆದರೆ ಹಿಂಸೆಗೆ ಮಾತ್ರ ಇಳಿಯಬೇಡಿ ಎಂದು ಗಾಂಧೀಜಿಯವರು ಹೇಳಿದರು. ಉಪ್ಪಿನ ಸತ್ಯಾಗ್ರಹ ಕಾಲದಲ್ಲಿ ಅವರು ಮಾಡಿದ ಐತಿಹಾಸಿಕ ದಂಡಿ ಯಾತ್ರೆಯ ಪ್ರತಿಧ್ವನಿಯು ಜನಾಂಗ ದ್ವೇಷದ ವಿರುದ್ಧ ಅಮೆರಿಕಾzಲ್ಲಿ ನಡೆದÀ ಮೊಂಟ್ ಗೋಮರಿ ಬಸ್ ಬಹಿಷ್ಕಾರದ ಸಂದರ್ಭದಲ್ಲಿ ಮೊಳಗಿದ್ದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು. ಮಾರ್ಟಿನ್ ಲೂಥರ್ ಕಿಂಗ್ ಹೇಳಿದರು : ‘ಮಾನವ ಜನಾಂಗದ ಏಳಿಗೆಗೆ ಗಾಂಧಿಯವರು ಅನಿವಾರ್ಯ. ಶಾಂತಿ-ಸಾಮರಸ್ಯಗಳಿಂದ ಕೂಡಿದ ಜಗತ್ತಿನೆಡೆಗೆ ಮಾನವತೆಯ ಪಯಣ ಎಂಬ ತತ್ವಕ್ಕಾಗಿ ಅವರು ಬದುಕಿದರು, ಚಿಂತಿಸಿದರು ಮತ್ತು ಸಕ್ರಿಂiÀiರಾದರು.’


ಅಮೆರಿಕಾದ ಪ್ರಸ್ತುತ ಅಧ್ಯಕ್ಷ ಬರಾಕ್ ಒಬಾಮ ಅವರೂ ಗಾಂಧಿಯನ್ನು ಒಂದು ಸ್ಫೂರ್ತಿಯ ಚಿಲುಮೆಯಾಗಿ ಪರಿಗಣಿಸಿದರು.: ಅವರ ಕಛೇರಿಯಲ್ಲಿ ಶಾಂತಿದೂತರೆನಿಸಿದ ಗಾಂಧೀಜಿಯವರ ಚಿತ್ರವನ್ನು ಅವರು ಇಟ್ಟುಕೊಂಡಿದ್ದಾರೆ. ಅವರು ಹೇಳುತ್ತಾರೆ : ‘ಸಾಮಾನ್ಯ ಮಂದಿಯನ್ನು ಅಸಾಮಾನ್ಯರನ್ನಾಗಿ ಮಾಡಿ ಅವರಲ್ಲಿ ಪರಿವರ್ತನೆಯನ್ನು ತರುವ ಗಾಂಧೀಜಿಯವರೇ ನನಗೆ ಸ್ಫೂರ್ತಿ.’


ಗೃಹಬಂಧನದಲ್ಲಿ ಹಲವು ವರ್ಷಗಳ ಕಾಲವಿದ್ದ ಬರ್ಮೀ ನಾಯಕಿ ಔಂಗ್ ಸಾನ್ ಸೂಕಿ ಗಾಂಧೀಜಿಯವರಿಂದ ಅಪಾರ ಸ್ಫೂರ್ತಿಯನ್ನು ಪಡೆದವರು. ಶಾಂತಿ ಮತ್ತು ಹೊಂದಾಣಿಕೆಯ ಮನೋಭಾವಗಳನ್ನು ಬೆಳೆಸುವಲ್ಲಿ ಅತ್ಯಗತ್ಯವಾಗಿ ಬೇಕಾದುದು ನಿರ್ಭಯತೆ ಎಂಬುದು ಅವರಿಗೆ ತಿಳಿದಿತ್ತು. ಮೃಗೀಯತೆ ಮತ್ತು ದ್ವೇಷ ತುಂಬಿದ ಆಳ್ವಿಕೆಯ ಎದುರು ಕತ್ತಲು ಮತ್ತು ಒಬ್ಬಂಟಿತನಗಳ ಮಧ್ಯೆಯೂಆಕೆ ಪಡೆದ ಯಶಸ್ಸಿನ ಗುಟ್ಟು ಇದೇ ಆಗಿತ್ತು. ಆಕೆ ಬರೆದ ಒಂದು ಪ್ರಬಂಧ ಹೀಗೆ ತೆರೆದುಕೊಳ್ಳುತ್ತದೆ : ‘ಭ್ರಷ್ಟತೆಗೆ ಕಾರಣ ಅಧಿಕಾರವಲ್ಲ, ಭಯ’ ಎಂಬುದಾಗಿ. ನೆಹರೂ ಮತ್ತು ಎಲ್ಲ ಭಾರತಿಯ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ಬಂದೂಕಿಗೆ ಭಯ ಪಡದಿರಲು ಕಲಿಸಿದ್ದು ಗಾಂಧೀಜಿ. ನೆಹರೂ ಗಾಂಧೀಜಿಯವರನ್ನು ಹೀಗೆ ವರ್ಣಿಸುತ್ತಾರೆ : ‘ಅವರು ಬೆಳಕಿನ ಕಿರಣದಂತೆ . ಶುದ್ಧಗಾಳಿಯ ಶಕ್ತ ಪ್ರವಾಹದಂತೆ..’


ಈ ಎಲ್ಲ ಮಾತುಗಳು ಹೇಳುವುದೇನೆಂದರೆ ಗಾಂಧಿವಾದವು ಜಗತ್ತಿನಲ್ಲಿ ಈಗಲೂ ಜೀವಂತವಾಗಿದೆ. ಜಗತ್ತಿನಾದ್ಯಂತದ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ನಾಯಕರಿಗೆ ಸ್ಫೂರ್ತಿಯ ಸೆಲೆಯಾಗುವುದರ ಮೂಲಕ ಅವರನ್ನು ಮುನ್ನಡೆಸುವ ಚೇತನ. ವಿಯೆಟ್ನಾಮಿನ ನಾಯಕ ಥಿಕ್ ನ್ಹಾಟ್ ಕ್ಹಾನ್ ‘ಒಂದು ಕ್ರಿಯೆಯ ಗುರಿಗಿಂತ ದಾರಿ ಮುಖ್ಯ’ ಎಂದ ಗಾಂಧೀಜಿಯವರ ಮಾತಿನಿಂದ ತಾನು ಪ್ರೇರಿತಗೊಂಡೆ ಎಂದಿದ್ದಾರೆ.: ‘ಒಂದು ಕೆಲಸದಲ್ಲಿ ನಾವು ವಿಫಲರಾಗಬಹುದು, ಆದರೆ ಸರಿಯಾದ ಕೆಲಸವನ್ನು ಸರಿಯಾದ ರೀತಿಯಲ್ಲಿ ಅಹಿಂಸಾತ್ಮಕವಾಗಿ ಪರಸ್ಪರ ಪ್ರೀತಿಯಿಂದ ಮಾಡಿದೆವೆಂದಾದರೆ ಗೆಲುವು ಕಟ್ಟಿಟ್ಟ ಬುತ್ತಿ. ಇದುವೇ ಗಾಂಧಿ ತತ್ವ.

ಎಂಬ ಅದರ ಇನ್ನೊಂದು ಮುಖದ ಬಗ್ಗೆ ನಾವು ಯಾಕೆ ಆಲೋಚಿಸಲಿಲ್ಲ?

ಗಾಂಧೀಜಿ ಓರ್ವ ಸಂತರೆ? ಜನರು ಅವರನ್ನು ‘ರಾಜಕಾರಣಿಯಾಗಲು ಪ್ರಯತ್ನಿಸುವ ಸಂತ ‘ ಎಂದು ಕರೆದಾಗ ಅವರು ತಡೆದು, ‘ತಾನು ಸಂತನಾಗಲು ಪ್ರಯತ್ನಿಸುವ ರಾಜಕಾರಣಿ’ ಎಂದರು. ನಿಜ ಹೇಳಬೇಕೆಂದರೆ ಅವರು ಓರ್ವ ಸಾಮಾನ್ಯ ವ್ಯಕ್ತಿಯೇ ಆಗಿದ್ದರು. ಯೇಸುಕ್ರಿಸ್ತ-ಬುದ್ಧರದ್ದೇ ದಾರಿಯಲ್ಲಿ ನಡೆಯ ಬಯಸಿದ ಸಾಮಾನ್ಯ ವ್ಯಕ್ತಿ. ‘ ನಾನು ಜಗತ್ತಿಗೆ ಹೊಸದಾಗಿ ಬೋಧಿಸುವುದು ಏನೂ ಇಲ್ಲ. ಯಾಕೆಂದರೆ ನಾನು ಪ್ರತಿಪಾದಿಸುವ ತತ್ವಗಳಾದ ಸತ್ಯ-ಅಹಿಂಸೆಗಳು ನಿಸರ್ಗದಲ್ಲಿನ ಗುಡ್ಡ-ಬೆಟ್ಟಗಳಷ್ಟೇ ಹಳೆಯವು ‘ಎಂದರು. ಆಧುನಿಕ ಜಗತ್ತಿನಲ್ಲಿ ಬದಲಾವಣೆ ತರುವ ಎರಡು ಶಕ್ತ ಸಾಧನಗಳೆಂದರೆ ಸತ್ಯ ಮತ್ತು ಅಹಿಂಸೆ ಎಂದು ಕೃತಿಯ ಮೂಲಕ ತೋರಿಸಿದವರು ಗಾಂಧೀಜಿ. ಅವು ವೈಯಕ್ತಿಕ ಮಟ್ಟದಲ್ಲಿ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ಎಲ್ಲರ್ರೂ ಪಾಲಿಸ ಬೇಕಾದ ತತ್ವಗಳು. ಯುದ್ಧಗಳಿಂದಾಗಿ ನಾಶೋನ್ಮುಖವಾಗಿರುವ ಈ ಜಗತ್ತಿಗೆ ಇಂದು ಇವು ಬಹಳ ಅಗತ್ಯ ಎಂzವÀರು ಗಾಂಧೀಜಿ.


21ನೆಯ ಶತಮಾನವನ್ನು ನಾವು ಶ್ರೀಸಾಮಾನ್ಯನ ಯುಗ ಎಂದು ಕರೆಯುವುದಾದರೆ ಗಾಂಧಿವಾದವು ಇಂದು ಹೆಚ್ಚು ಪ್ರಸ್ತುತ ಎಂಬುದನ್ನು ಒಪ್ಪಿಕೊಳ್ಳಲೇ ಬೇಕು. ಸಾಮಾಜಿಕ ಏಳಿಗೆಗಾಗಿ ಎಲ್ಲಾ ಕಾಲಗಳಲ್ಲಿ ಹೋರಾಡುವ ಎಲ್ಲರಿಗೂ ಗಾಂಧೀಜಿ ಸ್ಫೂರ್ತಿ. ಭಾರತದಂಥ ದೇಶದಲ್ಲಿ ಗಾಂಧಿವಾದವು ಪರೀಕ್ಷೆಗೊಳಗಾಗಿದೆ ಎಂದು ಹೇಳಿದರೆ ಅದು ಗಾಂಧಿವಾದದ ದೌರ್ಬಲ್ಯವಲ್ಲ. ಬದಲಾಗಿ ಭಾರತೀಯ ಸಮಾಜದಲ್ಲಿರುವ ಕೆಡುಕುಗಳ ವಿರುದ್ಧ ಹೋರಾಟ ನಡೆಸಬಲ್ಲ , ಧೈರ್ಯ ಮತ್ತು ಸಂಕಲ್ಪ ಶಕ್ತಿಗಳಿರುವ ನಾಯಕರು ನಮ್ಮಲ್ಲಿ ಇಲ್ಲವೆಂದು ಅರ್ಥ.ಅಂಥ ಸಶಕ್ತ ನಾಯಕರು ಇನ್ನು ಮುಂದಾದರೂ ಬರಲಿ ಎಂಬ ಆಶಯ ನಮ್ಮದಾಗಿರಲಿ.


-ಡಾ.ಪಾರ್ವತಿ ಜಿ. ಐತಾಳ್, ಕುಂದಾಪುರ


55 views0 comments
bottom of page