top of page

ಗೀತೆ [ಕವನ]

ಹುಚ್ಚು ಮಳೆಯೇ

ಹೆಚ್ಚೇನು ಹೇಳಲಾರೆ

ಕೊಚ್ಚಿ ಹೋಗೊ ಕನಸ

ವೆಚ್ಚವ ಭರಿಸಲಾರೆ


ಸಂತಸ ಸಂಭ್ರಮ

ನಿನ್ನ ಬೆವರ ಹನಿಗೆ

ಆರಾಧನೆ ಆಕರ್ಷಣೆ

ನನ್ನ ಮನದ ಒಳಗೆ


ನಿನ್ನ ಸಿಂಚನ ಬಾನಂಚಿನ

ಸಿಡಿಲ ಊರಾಗಿದೆ

ಭಾವನೆ ಬಾಯಾರಿದೆ

ಮನಸು ಮೆರೆದಾಡಿದೆ


ಜಿಂಕೆಯಂತೆ ಮುಗಿಲ

ಓಟಗಾರ ನೀನು

ಬಿಲ್ಲು ಇರದ ಇಳೆಯ

ಬೇಟೆಗಾರ ನಾನು

=00=

ಮಂಜುನಾಥ ನಾಯ್ಕ ಯಲ್ವಡಿಕವೂರ

50 views0 comments

Comments


bottom of page