*ಗೀತವಾಗಲಿ ಬದುಕು*

ಪ್ರತಿ ಸಾಲಿನಲ್ಲಿ ದೊರೆಯದಿದ್ದರೂ ಪ್ರಾಸ ಗೇಯತೆಯು ನಿರಂತರ ಇರಲಿ ಶಬ್ದಶಬ್ದಗಳಲ್ಲೂ ಅಡಗಿರಲಿ ಗೂಢಾರ್ಥ ಪಲ್ಲವಿಯು ಲಯವನ್ನು ಉಳಿಸಿಕೊಂಡಿರಲಿ ಗೀತವಾಗಲಿ ಬದುಕು ಜಂಜಡತೆಯ ನಡುವೆ ಸಂಗೀತವಾಗಲಿ ಮುದವೀಯಲಿ. ಮೊದಲ ಓದಿಗೆ ಅರ್ಥವಿಸಿ ಕೊಳ್ಳದಂತಿರಲಿ ಸಾಧ್ಯತೆ ಗಳನೇಕವನು ಹುಟ್ಟುಹಾಕುತ್ತಿರಲಿ. ಬಾಲಿಶತೆಗೆಡೆಗೊಡದೆ ಗಾಂಭೀರ್ಯ ಹೊಂದಿರಲಿ ಮಧುರತೆಯು ಮೈತುಂಬ ಮೈಗೂಡಲಿ ಗೀತವಾಗಲಿ ಬದುಕುಮುದವೀಯಲಿ. ಕಂಡಕಂಡವರಿಗೆಲ್ಲ ಕೈಗೆಟುಕದಿರಲಿ ಕೆಂಡಸಂಪಿಗೆ ಕಂಪು ಕೂಡಿಕೊಂಡಿರಲಿ ಬಂಡೆಯಾಗಲಿ ಆರೋಪಗಳ ಸುರಿಮಳೆಗೆ ಗಂಡೆದಯ ಗುಂಡಿಗೆಯ ಭಾಂಡವಾಗಿರಲಿ ಗೀತವಾಗಲಿ ಬದುಕು ಮುದವೀಯಲಿ. ಚಿದಾನಂದ ಭಂಡಾರಿ ಕಾಗಾಲ.
11 views0 comments