ಬಂದಾ ನೋಡು ಗೆಂಡೆತಿಮ್ಮ
ಹೊಟ್ಟೆ ರಟ್ಟೆಯ ಊದಿಸಿಕೊಂಡು
ಸುತ್ತ ಮುತ್ತ ಪರಿವೆ ಇಲ್ಲದೆ
ತನ್ನನು ತಾನೆ ಎಳೆದುಕೊಂಡು
ಕೊಟ್ಟಿದೆಲ್ಲಾ ತಿಂದಾ
ಸಿಕ್ಕಿದೆಲ್ಲ ಕುಡಿದ
ದೇಹಾವಸ್ಥೆಯ ಲೆಕ್ಕಿಸದೆ
ಮಲಗಿಯೆ ಸುಖವ ಅನುಭವಿಸಿದ
ಬಂದವು ನೋಡಿ ಮಹಾಮಾರಿಗಳು
ಬಿಪಿ ಶುಗರು ಪೈಲ್ಸ್ ಗಳು
ದೇಹದ ಪರೀಕ್ಷೆ ಶುರುವಾಯಿತು
ಫೇಲಾದರೆ ಆಪತ್ತಾದೀತು
ಆಸ್ಪತ್ರೆ ಚಿಕಿತ್ಸೆ ಎಂದು ಊರೂರು ಅಡ್ಡಾಡಿದ
ಜಿಮ್ಮು ಯೋಗ ಎಂದು ಎಲ್ಲಾ ಶುರು ಮಾಡಿದ
ದೇಹವ ಕಸದತೊಟ್ಟಿ ಮಾಡಿದರೆ ವಾಸನೆ ಬಾರದೆ?
ಶುಚಿಗೊಳಿಸದೆ ಇರೆಬೇರೆ ದಾರಿ ಇದೆಯೆ!
ಹಿತ ಮಿತ ಆಹಾರ ವ್ಯಾಯಾಮ
ಪುಷ್ಟನಾಗಿಹನೀಗ ಗೆಂಡೆತಿಮ್ಮ
ದೇಹ ಮನಸ್ಸಿನ ಪೊರೆ ಕಳಚಿಹನು
ಸ್ವಸ್ಥ ದೇಹ ಸ್ವಸ್ಥ ಮನಸ್ಸು
ನಕ್ಕು ನಲಿಯಿರಿ ಸುಖವಾಗಿರಿ
ಎಂದು ಸಾರಿ ಸಾರಿ ಹೇಳುತಿಹನು
- ನಿಶಾಂತ ಶ್ರೀಪಾದ
Comments