top of page

💐🎉ಖುಷಿ ಹಂಚಿಕೊಳ್ಳುವ ಸುದ್ದಿ. 💐

ಕರ್ನಾಟಕ ಜಾನಪದ ಅಕಾಡೆಮಿಯು ನನ್ನ ನೆಚ್ಚಿನ ಗುರುಗಳಾದ ಡಾ. ಶ್ರೀಪಾದ ಶೆಟ್ಟಿ ಅವರಿಗೆ " ಜಾನಪದ ತಜ್ಞ" ಪ್ರಶಸ್ತಿ ನೀಡಿ ಗೌರವಿಸಿದೆ. ಈ ಪ್ರಶಸ್ತಿ ನನ್ನ ಗುರುಗಳ ಪರಿಚಯ, ಅವರ ಸಾಹಿತ್ಯ ಕೊಡುಗೆ ಕನ್ನಡ ನಾಡಿನ ಎಲ್ಲೆಡೆ ತಲಪುವುದಕ್ಕೆ ಕಾರಣವಾಗಿದೆ. 🏆 💐


ಶೆಟ್ಟಿ ಪ್ರೊಫೆಸರ್, ಎಸ್. ಏನ್. ಶೆಟ್ಟರು , ಶ್ರೀಪಾದ ಶೆಟ್ಟರು ಹೀಗೆ ಬೇರೆ ಬೇರೆ ರೀತಿಯಾಗಿ ವಿದ್ಯಾರ್ಥಿ ಹಾಗೂ ಶಿಕ್ಷಕ ವೃಂದಗಳ ನಡುವೆ ಗುರುತಿಸಿಕೊಳ್ಳುತ್ತಿದ್ದ ಡಾ. ಶ್ರೀಪಾದ ಶೆಟ್ಟಿ ಪ್ರೊಫೆಸರ್, ನನ್ನ ಕನ್ನಡದ ಗುರುಗಳಾಗಿದ್ದರು, ಅಂಕೋಲೆಯ ಜಿ . ಸಿ . ಕಾಲೇಜಿನಲ್ಲಿ . ನಾನು ವಿಜ್ಞಾನದ ವಿದ್ಯಾರ್ಥಿಯಾಗಿದ್ದುದರಿಂದ, ಅವರ ಕಲಾ ಮಾಧ್ಯಮದ ಕನ್ನಡ ವಿದ್ಯಾರ್ಥಿಸಾಗರಕ್ಕಿದ್ದಷ್ಟು ಅವಕಾಶ ನನಗೆ ಅವರ ಪಾಠ ಕೇಳಲು ಸಿಗಲಿಲ್ಲ . ಆದರೇನು, ಕಾಲೇಜಿನಲ್ಲಿ ನಡೆಯುತ್ತಿದ್ದ ವಿವಿಧ ಸಮಾರಂಭಗಳಲ್ಲಿ ಅವರ ಭಾಷಣ ಕೇಳುವುದು ನಾನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಆದರೆ ನನ್ನ ಅಕ್ಕ , ಅಣ್ಣಂದಿರು ಅವರ ಹತ್ತಿರ ಹೆಚ್ಚಿನ ವಿದ್ಯಾರ್ಥಿ ಬಾಂಧವ್ಯ ಹೊಂದಿದವರು. 😊😊


ಶೆಟ್ಟಿ ಪ್ರೊಫೆಸರ್ ಪರಿಚಯವಿದ್ದವರೆಲ್ಲರೂ ಒಪ್ಪುವ ಒಂದು ಮಾತು, ಅವರ ಅತ್ಯಂತ ಸರಳತೆ….ಒಂದೇ ಮಾತಿಗೆ ದೀರ್ಘ ದೋಸ್ತಿ ಇದ್ದಂತೆ ಆಪ್ತರಾಗುವುದು ಮತ್ತು ಪ್ರತಿಯೊಬ್ಬರ ಬಗ್ಗೂ ಅಪಾರ ಕಾಳಜಿ ... ಹಾಗಾಗಿ ಶೆಟ್ಟಿ ಪ್ರೊಫೆಸರ್ ಅವರನ್ನು ನಾನು ನನ್ನ " ಗುರು ಗೆಳೆಯರು" ಎಂದು ಹೇಳಿಕೊಳ್ಳಲು ಬಯಸುತ್ತೇನೆ. 😊😊


ಎಲ್ಲೇ ಸಿಗಲಿ , " ಏನ್ ತಮ್ಮಾ , ಕಿರಣಾ.. ಆರಾಮಿದ್ಯೋ .. " ಎಂದೇ ಪ್ರಾರಂಭಿಸಿದಾಗ, ನನಗನಿಸುವುದುಂಟು, ಪೂರ್ವ ಜನ್ಮದಲ್ಲಿ ನಾವು ಅತಿ ಹತ್ತಿರದ ಭಾಂಧವ್ಯ ಹೊಂದಿದ್ದೇವೆನೋ" ಎಂದು . ಮೊದ ಮೊದಲು ಇವರ ಮಾತು ಕೇಳಿದಾಗ ನನಗನಿಸಿದ್ದುದು, ಇವರೊಬ್ಬ ಬಂಡಾಯ ಸಾಹಿತಿ ಎಂದು.. ನಂತರ ಅರಿವಾದದ್ದು ದೀನರ ಬಗ್ಗೆ ಇರುವ ಕಾಳಜಿ ಆ ರೀತಿ ಮಾತನಾಡಿಸುತಿತ್ತು. ಬೆರಗು ಬೀಳುವಷ್ಟು ದೇವರ ಬಗ್ಗೆ ಅವರಿಗಿರುವ ನಂಬಿಕೆ ಶೃದ್ಧೆ, ನನ್ನ ಮೊದಲಿನ ಭಾವನೆಯನ್ನು ಹುಸಿಯಾಗಿಸಿಬಿಟ್ಟಿತ್ತು. 🙏🙏


ಉತ್ತರ ಕನ್ನಡ ಜಿಲ್ಲೆಯ ಚುಟುಕು ಬ್ರಹ್ಮ ಡಾ. ದಿನಕರ ದೇಸಾಯಿ ಅವರ ಬದುಕು ಬರಹ ಬಗೆಗಿನ ಅವರ ಸಂಶೋಧನಾ ಕೃತಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ದೊರಕಿದೆ. ಅಂಕೋಲೆಯ ಜಿ. ಸಿ . ಕಾಲೇಜು ಮತ್ತು ಹೊನ್ನಾವರ ಕಾಲೇಜಿನಲ್ಲಿ ಸುದೀರ್ಘ ಪ್ರಾಧ್ಯಾಪಕ / ಪ್ರಾಂಶುಪಾಲ ಸೇವೆ ಸಲ್ಲಿಸಿ ಸದ್ಯ ವೃತ್ತಿಯಿಂದ ವಿಶ್ರಾಂತಿ ಪಡೆದರೂ, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ಇನ್ನೂ ಹೆಚ್ಚಿಗೆ ಸಮಯ ಕೊಡುತ್ತಿದ್ದಾರೆ. ಜಾನಪದ ಸಾಹಿತ್ಯ ಪ್ರಪಂಚಕ್ಕೆ ಇವರ ನಿಸ್ವಾರ್ಥ ಕೊಡುಗೆ ಗುರುತಿಸಿದ ಕರ್ನಾಟಕ ಜಾನಪದ ಅಕಾಡೆಮಿ ಇವರನ್ನು "ಜಾನಪದ ತಜ್ಞ" ಪ್ರಶಸ್ತಿ ನೀಡಿ ಗೌರವಿಸಿದ್ದು, ನನಗೆ ಪ್ರಶಸ್ತಿ ಸಿಕ್ಕಷ್ಟು ಖುಷಿಯಾಯ್ತು .. ಇದು ಅತಿಶಯೋಕ್ತಿಯಲ್ಲ . 🙏🙏


ನಮ್ಮ " ಗುರು ಗೆಳೆಯರಾದ" ಶೆಟ್ಟಿ ಪ್ರೊಫೆಸರ್ ಗೆ ಭಗವಂತನು ಆಯುರಾರೋಗ್ಯ ದಯಪಾಲಿಸಿ, ಅವರಿಂದ ಕನ್ನಡ ಸಾಹಿತ್ಯಕ್ಕೆ ಮತ್ತು ದೀನ ಜನತೆಗೆ ಹೆಚ್ಚಿನ ಕೊಡುಗೆ ಸಿಗಲೆಂದು ಕನ್ನಡ ಸ್ನೇಹದಂಗಳದ ಪರವಾಗಿ ಹಾರೈಸುತ್ತೇನೆ .💐


ಕಿರಣ ಅಂಕಲೇಕರ

ಪುಣೆ
11 views0 comments

Comments


bottom of page