ಖಾಲಿಕೈ ಫಕೀರ.
- ಅಬ್ಳಿ,ಹೆಗಡೆ.
- Oct 15, 2020
- 1 min read
ನನಗರಿವಿಲ್ಲದೇ.....
ಕಾಣದಲೋಕದ ಕದ ತಟ್ಟಿದೆ
ಬೆಳಕ ಬಾಗಿಲು ತೆರೆಯಲೇ ಇಲ್ಲ.
ಕತ್ತಲ ಕೂಪ ಕಳೆಯಲೇ ಇಲ್ಲ.
ಬದುಕಲ್ಲಿ ಕಂಡಸಂಖ್ಯ ಕನಸುಗಳಿಗೆಲ್ಲ
ಒಂದು ಅನಿರೀಕ್ಷಿತ ಹ್ರದಯ ಸ್ಪರ್ಶಿ
ವಿದಾಯ ಘೋಷಿಸಿ,
ಒಮ್ಮೆಯಾದರೂ ಆತ್ಮೀಯರ
ಕಣ್ಣಂಚ ಒದ್ದೆಯಾಗಿಸಿ
ಆಟ ನಿಲ್ಲಿಸಬೇಕೆಂದರೆ ಅದೂ
ಸಫಲವಾಗಲಿಲ್ಲ.
ಕೊನೇ ಬಿಂದುವಿನಲ್ಲಾದರೂ
ಸಾರ್ಥಕ ಬದುಕಿನ ಸಣ್ಣ ತ್ರಪ್ತಿ
ಯೊಂದಿಗಾದರೂ ವಿರಮಿಸ
ಬೇಕೆಂದರೆ ಅದೂ ಕೈಗೂಡಲಿಲ್ಲ.
ಸಧ್ಯ ನಾ ಮೊದಲಿನಂತೇ..
ಭಾವದ ಭಿಕಾ಼ಪಾತ್ರೆ ಹಿಡಿದು
ಅಲೆದಾಡುವ ಏಕಾಂಗಿ,
ಪ್ರಾರಬ್ಧಕ್ಕೆ ಪಕ್ಕಾದ ಖಾಲಿಕೈ
ಫಕೀರ ಅಷ್ಟೆ....!!!!
--ಅಬ್ಳಿ,ಹೆಗಡೆ.
--ದಿ;;-೭-೧೦-೨೦.
Comments