🌺ಕಾವ್ಯ ಕುಸುಮ 🌺
ಎದೆಯ ತಟ್ಟುವ ಹಾಡು
ಹದುಳ ಮನದಲಿ ಹೂಡು
ಮೆದುತನದ ಸಾರಭರಿಸುತ್ತ ಪಾಡು
ಹೃದಯ ಹೊಲವನು ಮಾಡು
ಹುದುಗಿರುವ ಕಳೆ ಜಾಡು
ಸದಭಿಮಾನದಿ ತಳೆವ ಚೆಂದ ನೋಡು
ಮನಕುಲುಕುವಾಗಾನ
ಮನಕಮಲದೊಳಗಿನಾ
ತನನ ತಾನನ ಮೀಟುವoದವೇನು
ಮನಕಲಕುವಾ ಕವನ
ಮನಕದಡುವುದು ತಾನೆ
ಜನರೆದೆಯ ಗೂಡಿನಲಿ
ನೋವದೇನು
ಭಕ್ತಿ ರಸದೊಳಗಿರಲಿ
ಮುಕ್ತ ಮನವನ್ನು ಗೆಲಿ
ವ್ಯಕ್ತಗೊಳುತಿರೆ ಭಾವ ಚಿತ್ತವರಳಿ
ಶಕ್ತ ಪದಹಾಸಿನಲಿ
ಸೂಕ್ತ ಗಾನದ ಶೈಲಿ
ಶಕ್ತಿ ಭರಿಸುತಲಿರಲು ಕಾವ್ಯ ಮೇಲು
ಕಂದ ಪದಗಳ ಹಾಸು
ಚೆಂದ ಸೂತ್ರವ ಬಳಸು
ಸಂಧಿ ವಿಗ್ರಹದೊಳಣ ತೊಡಕು ಸರಿಸು
ಅಂದಿನಾ ಕಾವ್ಯ ರಸ
ವಿoದಿಗೂ ಬಲು ಸೊಗಸು
ಮಂದ ಹಾಸವ. ಬೀರಿ ಕಾವ್ಯ ಸೂಸು
ಪ್ರೇಮ ಕಾವ್ಯದ ತುಡಿತ
ಸಾಮರಸ ದನಿ ಮಿಳಿತ
ಕಾಮ ದಾಟದ ಸೊಲ್ಲ ಕೊಂಚ ಬಿಡುತ
ನೇಮ ಪಾಲಿಸುವಂತ
ಕ್ಷೇಮದಾಯಕ ಮಾತು
ಸಾಮಾನ್ಯ ಜನಮನಕೆ ತಟ್ಟು ವಂತೆ
ನಾಗೇಶ ಅಣ್ವೇಕರ ಕಾರವಾರ
Comments