top of page

ಕಾಳ ಬದುಕು

ಕಾಳಬದುಕು ಸವೆಸುವ

ಕರ್ಪೂರದ ಗೊಂಬೆ

ಅಕ್ಷಿಯ ತುಂಬಾ ಸುರುಮಾ

ಮುಳುಗಿದೆ

ಪಠಾಣ್ ಗಲ್ಲಿಯ ತುಂಬಾ

ಬೊಂಬಾಯಿ ಬೇಂಡಿ ಬಜಾರಿನ

ಅತ್ತರಿನ ಘಮಲು

ಆ ಭಾನಶಶಿ ಅವಳ

ವದನ ಕಂಡು

ಮಾಯವಾದ

ಅವಳಿಗೂ ಆಸೆ

ಎಲ್ಲರಂತೆ ಸ್ವಚ್ಛಂದ ವಾಗಿ

ಬದುಕಬೇಕೆಂದು

ಆದರೆ ಪರದಾದಲ್ಲಿ ಅವಿತು

ಕುಳಿತ್ತಿದ್ದಾಳೆ

ವ್ಯವಸ್ಥೆಯೇ ಅವಳಿಗೆ

ಗಪ್ ಚುಪ್ ಗೊಳಿಸಿದೆ

ಖಬೂಲ್ ಎಂದರೆ ಸಾಕು

ನೇಸರನ ಕಿರಣಕೆ

ತನ್ನ ತೊಗಲನು

ಪ್ರದರ್ಶಿಸುವ ತವಕ

ಷರಿಯತ್ ಗೆ ತಾನೆಲ್ಲಿ

ಕರಗಿ ಹೋಗುವನೆನೋ

ಎಂಬ ದುಗುಡ ಆಕೆಗೆ

ಕಾರ್ಮೋಡ ಕರಗಿ

ಬೆಳ್ಳಿರೇಖೆ ‌ಮೂಡಿದ ಹಾಗೆ

ಕಾಳ ಪರದೆ ಸರಿಸಿ

ಸ್ವತಂತ್ರ್ಯ ಬದುಕಿಗೆ

ದಾಂಗುಡಿಯಿಡಲು

ಕಾತುರಳಾಗಿದ್ದಾಳೆ.....


- ಅನಿಲ ಕಾಮತ,ಸಿದ್ದೇಶ್ವರ


13 views0 comments

Comments


bottom of page