ಅವಳೊಬ್ಬಳು ಭೂತಾಯಿಯ ಮಡಿಲಲಿ ಹರಿಯುವ
ಕಪ್ಪು ಬಣ್ಣದ ಆ ಕೃಷ್ಣ ಸುಂದರಿ
ಗುರು ಚೆನ್ನಬಸವನ ನಾಡಲಿ ಜನ್ಮ ತಳೆದ
ಆ ಪವಿತ್ರ ಸುಂದರಿ
ತನ್ನೊಡಲ ಬಗೆದು ಲೋಕಕೆ ಬೆಳಕ ನೀಡುವ,
ಆ ನಿಶ್ವಾರ್ಥ ಸುಂದರಿ
ವನದೇವಿಯ ಮಡಿಲಲಿ ವೈಯಾರದಿ ಬಳುಕುತ,
ವನ ಪ್ರಾಣಿಗಳ ದಾಹ ತಣಿಸುವ
ಆ ವನ ಸುಂದರಿ
ತನ್ನೊಡಲ ತ್ಯಾಗದ ಪರಿವೇ ಇಲ್ಲದೇ
ಸಮುದ್ರರಾಜನ ತೆಕ್ಕೆಯಲಿ ಮಿಲನವಾದ
ಆ ಅದೃಶ್ಯ ಸುಂದರಿ
(ನಮ್ಮ ಕಾಳಿ ನದಿ ನಮ್ಮ ಹೆಮ್ಮೆ)
ರತೀಶ್ ಮಂಜುಗುಣಿ
Comments