ಶ್ರೀಪಾದ ಹೆಗಡೆ ಹಡಿನಬಾಳ ಅವರು ಬಡತನವನ್ನು ಬದುಕಿ ಬಾಳಿದ ಶ್ರೀಮಂತ ಕಲಾವಿದರು.ಸದುವಿನಯವೆ ಸದಾಶಿವನೊಲುಮೆ ಎಂದು ನಂಬಿದ ಯಕ್ಷಗಾನ ಕಲಾವಿದ,ಮೂರ್ತಿ ಶಿಲ್ಪಿ,ಪ್ರಭಾವ ಶಾಲಿಯಾದ ಯಕ್ಷಗಾನದ ಅರ್ಥಧಾರಿ, ದೀವಗಿಯ ಸದ್ಗುರು ರಾಮಾನಂದರ ಪರಮ ಭಕ್ತ, ತಾನು ನಿರ್ವಹಿಸುವ ಯಕ್ಷಗಾನದ ಪಾತ್ರಗಳೊಂದಿಗೆ ತಾದಾತ್ಮ್ಯ ಹೊಂದಿ ಸಹೃದಯರಿಂದ ಸೈ ಸೈ ಎನಿಸಿಕೊಂಡ ಕಲಾವಿದ.
ಆಂಜನೇಯ,ಭೀಮ,ರಾಮ,ಧರ್ಮರಾಯ,ಅರ್ಜುನ ಹೀಗೆ ಯಾವುದೆ ಪಾತ್ರವನ್ನು ವಹಿಸಲಿ ಅಲ್ಲಿ ತನ್ನತನದ ಛಾಪನ್ನು ಒತ್ತಿದ,ಪುರಾಣದ ಪ್ರಜ್ಞೆಯನ್ನು ವಿಸ್ತರಿಸಿದ ಧೀಮಂತ ಕಲಾವಿದ.ಗಣಪತಿ ಮತ್ತು ಶಾರದೆಯ ಮೂರ್ತಿಯನ್ನು ಮೆತ್ತಿ ಅದಕ್ಕೆ ಜೀವಕಳೆಯನ್ನು ತುಂಬಿದ ಶಿಲ್ಪಿ. ಸಜ್ಜನ, ಸ್ನೇಹಮಯಿ ವ್ಯಕ್ತಿತ್ವದ ಸಂಭಾವಿತ ಗೆಳೆಯ ಶ್ರೀಪಾದ ಹೆಗಡೆಯವರ ನಿದನ ಅವರ ಒಡನಾಡಿಗಳ ಪಾಲಿಗೆ ನಿರ್ವಾತವನ್ನೆ ಸೃಷ್ಟಿಸಿದೆ. ಕಲಾ ತಪಸ್ವಿಯೇ ಆಗಿದ್ದ ಶ್ರೀಪಾದ, ಹಡಿನಬಾಳಿನ ಸತ್ಯ ಹೆಗಡೆಯವರ ಅಳಿಯ. ಶ್ರೀಪಾದನ ಆತ್ಮಕ್ಕೆ ಚಿರಶಾಂತಿ ಸಿಗಲಿ.
ಓಹ್!ಸೂಪರ್ ರಚನೆ.ಧನ್ಯವಾದಗಳು ಗೌಡ್ರೆ.👌👌💐💐