ಕ್ರಿಕೆಟ್- ಅಂದು ಇಂದು

ಪಂಚ್ ನೀಡದ ಪಂಚ ದಿನಗಳ ಅಂದಿನ ಟೆಸ್ಟ್ ಪಂದ್ಯಗಳು!

ಕಿರಿ ಕಿರಿಯಾಗುತ್ತಿದ್ದ ಕೆಟ್ಟ ಕ್ರೀಡೆ ಕ್ರಿಕೆಟ್!


ಸುದೀರ್ಘ ಸಹಿಷ್ಣುತೆ,

ಏಕಾಗ್ರತೆ.

ಶತಕ ಬಾರಿಸಲು

ಜಡವಾಗಿ ಉಡದಂತೆ ನಿಂತ ಡ್ರಾಗನ್ ಗಳು.

'ಡ್ರಾ' ಆಗುವುದೇ ಡ್ರಾಮಾದಲ್ಲಿ...


ಸೋಮಾರಿ ಕ್ರೀಡೆಗೆ

ಕರತಾಡಿಸಿ ಟೆಸ್ಟ್ ಪಂದ್ಯ ಬೆಸ್ಟ್ ಎಂದು ಬೀಗಿದ್ದ

ಅಭಿಮಾನಿಗಳು.

ನಿಧಾನವೇ ಪ್ರಧಾನವಲ್ಲವೇ?

ಸಹನೆ-ಸೈರಣೆ ಇದಕೆ ಕುಲದೈವ.


ಈಗ ಬದಲಾವಣೆ ಕ್ರಿಕೆಟ್ ನಿಯಮ!

ತಂದಿತು ಹೊಸ ಆಯಾಮ.

ಚೀರಾಟ ಕಾದಾಟವೇ ನವಿರೇಳಿಸುವ ಸಂವೇದನೀಯನೋಟ.


ಮೂರು ತಾಸಿನ

ತ್ರಾಸಿನ ಕ್ರಿಕೆಟ್; ನೂರಾರು

ರನ್ಗಳು...

ಇದುವೇ, ಪುನರಾವರ್ತಿತ ಕ್ರಿಕೆಟ್ ಅವತರಣಿಕೆ

ಐಪಿಎಲ್ ೨೦-೨೦


ಕ್ರಿಕೆಟಿಗರು ತಮ್ಮ ಮಾರಾಟಕ್ಕೆ ಸ್ವಯಂ ನಿಂತು ಬಹು ಕೋಟಿಯ

ಹಾರಾಜಿನಲ್ಲಿ ವೀರರಂತೆ ವಿರಾಜಿಸುವರು‌.


ವೇಗದ ಗೆಲುವೇ ಮೂಲ ಮಂತ್ರ.

ಇಲ್ಲಿ ಬೀಸುವುದೇ ಬ್ಯಾಟು,

ಚಚ್ಚುವುದೇ ಚೆಂಡು.

ಸಿಡಿಸಿದ ಸಿಕ್ಸರ್ ಗಳು ಬಾನಲ್ಲಿನ ನಕ್ಷತ್ರಗಳನ್ನು ಉದುರಿಸುವವು.


ಶಬ್ದವೇಗಿಗಳ ಹೊಡೆತಕ್ಕೆ ಲೋಕವೆಲ್ಲ ಸ್ತಬ್ಧ.

ನೋಡುಗರು ಆಡುಗರು ರೋಮಾಂಚಿತರು.

ವೇಗವೇ ಸುಯೋಗ.

ಚಂಡಿ-ಚಾಮುಂಡಿ ಇದಕೆ ಕುಲದೈವ.


ಸ ರಾಜೇಂದ್ರ

114 views4 comments